Thursday, July 25, 2013

ರಾಮಪತ್ರೆ- ವಾಣಿಜ್ಯ ಬೆಳೆಯಾಗಿ ಬೆಳೆಸುವ ಪ್ರಯತ್ನ

ರಾಮಪತ್ರೆ
ಮಂಗಳೂರು, ಜುಲೈ. 25:-ಭಾರತ ದೇಶದಲ್ಲಿ ದಕ್ಷಿಣ ರಾಜ್ಯ ಗಳಾದ ಕೇರಳ, ಕರ್ನಾ ಟಕ,ತಮಿಳು ನಾಡು, ಮಹಾರಾಷ್ಟ್ರ ರಾಜ್ಯ ಗಳ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ರಾಮ ಪತ್ರೆ ಯನ್ನು ಬೆಳೆ ಯುತ್ತಾರೆ.
ರಾಮ ಪತ್ರೆಯು ಹಳದಿ ಬಣ್ಣದಿಂದ ಕೂಡಿರುತ್ತದೆ ಮತ್ತು ಪತ್ರೆಯು ದಪ್ಪಗಿರುತ್ತದೆ. ಬೆಳೆಯ ಮಾಹಿತಿ ಕೊರತೆಯಿಂದ ವಾಣಿಜ್ಯ ಬೆಳೆಯಾಗಿ ಬೆಳೆಯದೇ ಇದ್ದು, ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಪ್ರಯತ್ನಿಸಲಾಗುತ್ತದೆ. ರಾಮಪತ್ರೆಯು ಮುಖ್ಯವಾಗಿ ಕಾಡುತ್ಪತ್ತಿಯಾಗಿದ್ದು ಉತ್ಪನ್ನವನ್ನು ಪ್ರಸ್ತುತ ಲ್ಯಾಂಪ್ ಸೊಸೈಟಿ ಮೂಲಕ ಸಂಗ್ರಹಿಸಿ ಮಾರಾಟ ಮಾಡಲಾಗುತ್ತದೆ.
ರಾಮಪತ್ರೆಯನ್ನು ಸಾಂಬಾರ ಪದಾರ್ಥವಾಗಿ ಉಪಯೋಗಿಸುವುದಲ್ಲದೆ ಇದರಲ್ಲಿ ಎಣ್ಣೆಯ ಅಂಶವು ಹೆಚ್ಚಿರುವುದರಿಂದ ಪೈಂಟ್ ಇತ್ಯಾದಿ ವಸ್ತುಗಳಲ್ಲಿ ಬಳಸಲಾಗುತ್ತಿದೆ. ಜನವರಿ ತಿಂಗಳಲ್ಲಿ ಹೂಬಿಟ್ಟು ಮುಂದಿನ ಜನವರಿಯಿಂದ ಎಪ್ರಿಲ್- ಮೇ ತಿಂಗಳ ವರೆಗೆ ಕಾಯಿ ಬಿಟ್ಟು ಕಾಯಿಯ ಕೊಯ್ಲಿಗೆ ಬರುತ್ತದೆ. ರಾಮಪತ್ರೆಯ ಕಾಯಿಯನ್ನು ಕಟಾವು ಮಾಡಿ ಮಧ್ಯಭಾಗಕ್ಕೆ ಹೋಳು ಮಾಡಿ ಕೆಳಗಡೆಯಿಂದ ಬೀಜದ ಸುತ್ತುವರಿದ ಪತ್ರೆಯನ್ನು ಬಿಡಿಸಿ ಒಣಗಿಸಿದರೆ ಅದು ಪತ್ರೆಯಾಗಿ ಉತ್ಪನ್ನವಾಗುತ್ತದೆ.
ಪ್ರಸ್ತುತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಳದಿ ರೋಗ ಬಾಧಿತ ತೋಟಗಳಲ್ಲಿ ಪುನಶ್ಚೇತನ ಕಾರ್ಯಕ್ರಮ, ಅನುಷ್ಠಾನ ಮಾಡುತ್ತಿರುವ ತೋಟಗಳಲ್ಲಿ ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಉತ್ತೇಜಿಸಲು ಪರಿಗಣಿಸಲಾಗುತ್ತಿದೆ.ಮುಂದಿನ ದಿನಗಳಲ್ಲಿ ಈ ಬೆಳೆಯನ್ನು ತೋಟದ ಬೆಳೆಯಾಗಿ ಬೆಳೆಯುವುದು ಆವಶ್ಯವಿದೆ. ಉತ್ಸಾಹಿ ರೈತರು ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಮಂಗಳೂರು(0824-2412628)      E-mail id:hoticlinicmangalore@gmail.com ಸಂಪರ್ಕಿಸಬಹುದಾಗಿದೆ.