ಮಂಗಳೂರು, ಜುಲೈ.04 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜೂನ್ ಅಂತ್ಯದ ವರೆಗೆ ಸುರಿದ ಮಳೆಯಿಂದಾಗಿ ಒಟ್ಟು 408 ಮನೆಗಳು ಜಖಂ ಗೊಂಡು ಒಟ್ಟು 72.64 ಲಕ್ಷ ರೂ.ಗಳಷ್ಟು ನಷ್ಟವುಂಟಾಗಿದ್ದುಈಗಾಗಲೇ12.98 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ.
ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ 3 ಜನರಿಗೆ ರೂ.4.50 ಲಕ್ಷ ಪರಿಹಾರ ನೀಡಿದ್ದು, ಇನ್ನು 9 ಜನರಿಗೆ ಪರಿಹಾರ ನೀಡಲುಬಾಕಿ ಇದೆ.
8 ಜಾನುವಾರುಗಳು ಮರಣಿಸಿದ್ದು, ಇವುಗಳ ಮಾಲೀಕರಿಗೆ ರೂ.20,000/- ಪರಿಹಾರ ವಿತರಿಸಲಾಗಿದೆ. 7 ಪಕ್ಕಾ ಮನೆಗಳಿಗೆ ಪೂರ್ಣ ಹಾನಿಯಾಗಿದ್ದು, ಇದರ ಒಟ್ಟು ನಷ್ಟ 5.37 ಲಕ್ಷಗಳಾಗಿದ್ದು, ಈಗಾಗಲೇ 5 ಜನರಿಗೆ ರೂ.1.33 ಲಕ್ಷ ಪರಿಹಾರ ಒದಗಿಸಲಾಗಿದೆ. 9 ಕಚ್ಚಾ ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, 11.78 ಲಕ್ಷ ನಷ್ಟ ಸಂಭವಿಸಿದೆ, ರೂ.52 ಸಾವಿರ ಪರಿಹಾರ ನೀಡಿದೆ.
75 ಪಕ್ಕಾ ಮನೆಗಳಿಗೆ ತೀವ್ರ ಹಾನಿಯಾಗಿದ್ದು, ಇದರಿಂದ ರೂ.22.9 ಲಕ್ಷ ನಷ್ಟ ಸಂಭವಿಸಿದ್ದು ರೂ.4.66 ಲಕ್ಷ ಪರಿಹಾರ ಪಾವತಿಯಾಗಿದೆ.ತೀವ್ರವಾಗಿ ಹಾನಿಯಾಗಿದ್ದ 30 ಕಚ್ಚಾ ಮನೆಗಳಿಂದ ರೂ.5.15 ಲಕ್ಷ ನಷ್ಟವುಂಟಾಗಿದ್ದು ಇಲ್ಲಿಯವರೆಗೆ ರೂ.92,000 ಪರಿಹಾರ ದೊರಕಿಸಲಾಗಿದೆ. 287 ಮನೆಗಳಿಗೆ ಭಾಗಶ: ಹಾನಿಯಾಗಿದ್ದು ಇದರಿಂದ ಒಟ್ಟು 27.44 ಲಕ್ಷ ಸಂಭವಿಸಿದ್ದು ರೂ.5.55 ಲಕ್ಷ ಪಾವತಿಸಲಾಗಿದೆ.