ಮಂಗಳೂರು,ಮೇ.29:ಕರ್ನಾಟಕ ರಾಜ್ಯ ವಿಧಾನ ಪರಿಷತ್ ಗೆ 2012 ನೇ ಜೂನ್10 ರಂದು ನಡೆಯುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ 7115 ಪುರುಷ ಹಾಗೂ 4744 ಮಹಿಳಾ ಮತದಾರರು ಸೇರಿದಂತೆ ಒಟ್ಟು 11859 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಕಳೆದ ಚುನಾವಣೆಯಲ್ಲಿ 5102 ಪುರುಷರು ಹಾಗೂ 3163 ಮಹಿಳೆಯರು ಸೇರಿ 8265 ಪದವೀಧರ ಮತದಾರರು ಜಿಲ್ಲೆಯಲ್ಲಿದ್ದರು. ಈ ಬಾರಿ 340 ಪುರುಷ ಹಾಗೂ 171 ಮಹಿಳಾ ಮತದಾರರು ಸೇರಿದಂತೆ ಒಟ್ಟು 511 ಮತದಾರರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದ್ದರೆ,ಹೊಸದಾಗಿ 2353 ಗಂಡಸರು ಹಾಗೂ 1752 ಮಹಿಳಾ ಮತದಾರರು ಸೇರಿದಂತೆ 4105 ಮತದಾರರು ಸೇರ್ಪಡೆಗೊಂಡಿದ್ದಾರೆ.
ಮೂಲ್ಕಿ ಮತಗಟ್ಟೆಯಲ್ಲಿ 380,ಮೂಡಬಿದ್ರಿ 330,ಗುರುಪುರ 295,ಸುರತ್ಕಲ್ 707,ಹಂಪನ್ ಕಟ್ಟೆ 4337,ಕೋಣಾಜೆ 591,ಬಂಟ್ವಾಳ 1389, ಬೆಳ್ತಂಗಡಿ 1178,ಪುತ್ತೂರು 1545, ಸುಳ್ಯ 830 ಹಾಗೂ ಪಂಜ ಮತಗಟ್ಟೆಯಲ್ಲಿ 277 ಮತದಾರರು ಮತ ಚಲಾಯಿಸಲಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಿಂದ 2745 ಪುರುಷ ಹಾಗೂ 2157 ಮಹಿಳಾ ಮತದಾರರು ಸೇರಿ ಒಟ್ಟು 4902 ಶಿಕ್ಷಕ ಮತದಾರರು ತಮ್ಮ ಮತ ಚಲಾಯಿಸಲಿರುವರು.
ಕಳೆದ ಚುನಾವಣೆಯಲ್ಲಿ 1864 ಪುರುಷ ಹಾಗೂ 1265 ಮಹಿಳಾ ಮತದಾರರು ಸೇರಿ ಒಟ್ಟು 3129 ಶಿಕ್ಷಕ ಮತದಾರರು ಇದ್ದರು.ಈ ವರ್ಷ 881 ಪುರುಷರು ಹಾಗೂ 892 ಮಹಿಳಾ ಮತದಾರರು ಸೇರಿ ಒಟ್ಟಾರೆ 1773 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 11 ಮತಗಟ್ಟೆಗಳಿವೆ. ಮೂಲ್ಕಿ ಮತಗಟ್ಟೆಯಲ್ಲಿ 144 ಮತದಾರರು ,ಮೂಡಬಿದ್ರೆ 225,ಸುರತ್ಕಲ್ 368, ಗುರುಪುರ 134,ಹಂಪನ್ಕಟ್ಟೆ 1642,ಕೋಣಾಜೆ 320, ಬಂಟ್ವಾಳ 480 ,ಬೆಳ್ತಂಗಡಿ 530,ಪುತ್ತೂರು 586,ಸುಳ್ಯ 346 ಹಾಗೂ ಪಂಜ ಮತಗಟ್ಟೆಯಲ್ಲಿ 97 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.