ಮಂಗಳೂರು, ಜನವರಿ.11:-ಏಡ್ಸ್ ಇಂದು ವಿಶ್ವದ ಹೆಮ್ಮಾರಿಯಾಗಿದೆ. ಇದರಿಂದ ಪ್ರತೀ ವರ್ಷ
ಶೇಕಡಾ 50 ರಷ್ಟು ಯುವ ಜನಾಂಗ ಸೋಂಕಿಗೆ ಈಡಾಗುತ್ತಿದ್ದಾರೆ.ಇದೊಂದು ಆತಂಕಿತ
ವಿಷಯವಾಗಿದ್ದು, ಯುವಕರಲ್ಲಿ ಜಾಗೃತಿ ಮೂಡಿಸಿ ಏಡ್ಸ್ ರೋಗಿಗಳ ಸಂಖ್ಯೆ ಹಾಗೂ ಸೋಂಕಿತರ
ಸಂಖ್ಯೆಯನ್ನು ಸೊನ್ನೆಗೆ ತರಬೇಕೆಂದು,ಇದಕ್ಕೆ ಯುವಜನತೆ ಸ್ಪಂದಿಸುವಂತೆ ದಕ್ಷಿಣಕನ್ನಡ
ಜಿಲ್ಲಾಧಿಕಾರಿ ಎನ್.ಪ್ರಕಾಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಅವರು ಇಂದು ನಗರದ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರೆ ಸಂಘಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಮಾತನಾಡಿ ದೇಶದಲ್ಲಿ ಏಡ್ಸ್ ಪೀಡಿತರ ಸಂಖ್ಯೆ 2.5 ಲಕ್ಸ ಇದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ 6736 ಏಡ್ಸ್ ರೋಗಿಗಳಿದ್ದಾರೆ.ಇವರಲ್ಲಿ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕೆಂದು ತಿಳಿಸಿ,ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಚ್ಐವಿ ಪೀಡಿತರ ನಿಗಮ ಮಂಡಳಿಗಳಿಂದ ಸಾಲ ಸೌಲಭ್ಯ,ನಿವೇಶನ ಮನೆ ಮುಂತಾದ ಸೌಲಭ್ಯ ಒದಗಿಸಲಾಗುತ್ತಿದೆಯೆಂದರು.
ಸಮಾರಂಭದಲ್ಲಿ ಡಾ.ಪಾರ್ವತಿ ಅಪ್ಪಯ್ಯ,ಡಿಎಚ್ಓ ಡಾ. ಶ್ರೀರಂಗಪ್ಪ,ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮಿನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು.