ಮಂಗಳೂರು, ಜನವರಿ.18:-ಸರ್ಕಾರದ ಶೇಕಡಾ 22.5 ಅನುದಾನ ದಲಿತ ಸಮಾಜದ ಅಸಹಾಯಕರಿಗೆ
ದೊರಕಿ ಅವರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಸಮಾನರಾಗಿ ಬದುಕಬೇಕು ಬಲಾಢ್ಯರು ಅವಕಾಶ
ನೀಡುವ ಮೂಲಕ ತ್ಯಾಗ ಮನೋಭಾವ ಹೊಂದುವಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ
ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಅಭಿಪ್ರಾಯ ಸೂಚಿಸಿದ್ದಾರೆ.
ಅವರು ಇಂದು ಮಂಗ ಳೂರು ವಿಶ್ವ ವಿದ್ಯಾನಿ ಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗ ಡಗಳ ಸೆಲ್ ವತಿ ಯಿಂದ ಶೇಕಡಾ 22.5 ಅನುದಾನದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ 36 ವಿದ್ಯಾರ್ಥಿಗಳಿಗೆ ವಿಶೇಷ ಘಟಕ ಮತ್ತು ಬುಡಕಟ್ಟು ವಿಶೇಷ ಯೋಜನೆಯಡಿ ರೂ.16.24 ಲಕ್ಷ ವೆಚ್ಚದಲ್ಲಿ ಲ್ಯಾಪ್ ಟಾಪ್ ಗಳನ್ನು ವಿತರಿಸಿ ಮಾತನಾಡಿದರು.ಮೀಸಲಾತಿಯಿಂದ ಪಡೆಯುವ ಸೌಲಭ್ಯಗಳು ಪರಿಶಿಷ್ಟರ ಏಳ್ಗೆಗೆ ಒಂದು ಅಸ್ತ್ರವಾಗಬೇಕು.ಆದರೆ ಇದು ಶಾಶ್ವತ ಊರುಗೋಲಾಗಬಾರದು ಎಂಬ ಕಿವಿ ಮಾತು ಹೇಳಿದ ಸಚಿವರು ಇದರಿಂದ ಅವರು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಇಂದು ದಲಿತರಿಗೆ ಅದರಲ್ಲಿ ತುಳಿತಕ್ಕೊಳಗಾದ ಅಸಹಾಯಕರಿಗೆ ಮೀಸಲಾತಿ ಸೌಲಭ್ಯಗಳು ದೊರಕಿಸಲು ಎಲ್ಲರೂ ಸ್ಪಂದಿಸಬೇಕೆಂದರು.
ಸಮಾ ರಂಭದ ಅಧ್ಯ ಕ್ಷತೆ ವಹಿಸಿದ್ದ ಕುಲ ಪತಿ ಪ್ರೊ.ಟಿ.ಸಿ.ಶಿವ ಶಂಕರ ಮೂರ್ತಿ ಯವರು ಮಾತ ನಾಡಿ ಮಂಗ ಳೂರು ವಿಶ್ವ ವಿದ್ಯಾ ನಿಲಯ ದಲ್ಲಿ ರೂ.1.15 ಕೋಟಿ ಗಳನ್ನು ವಿಶೇಷ ಘಟಕ ಹಾಗೂ ಬುಡಕಟ್ಟು ವಿಶೇಷ ಯೋಜನೆಗಳಿಗೆ ಮೀಸಲಿಟ್ಟಿದೆ ಎಂದರು. ವಿಶ್ವವಿದ್ಯಾಲಯದಲ್ಲಿ ಫೆಲೋಶಿಪ್ಗಳನ್ನು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ ರೂ.8000/-ದಂತೆ ನೀಡಲಾಗುತ್ತಿದೆ ಎಂದರು.ವಿಧಾನಪರಿಷತ್ ಶಾಸಕರಾದ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ/ಪಂಗಡದ ಸೆಲ್ನ ವಿಶೇಷಾಧಿಕಾರಿ ಉಮೇಶ್ ಚಂದ್ರ ವಂದಿಸಿದರು.