ಮಂಗಳೂರು, ಜನವರಿ.20 : ದಕ್ಷಿಣ
ಕನ್ನಡ ಜಿಲ್ಲೆಯಲ್ಲಿ 2013 ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಥಮ
ಸುತ್ತಿನ ಲಸಿಕೆ ನೀಡುವ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೋ ಅಭಿಯಾನಕ್ಕೆ
ಜಿಲ್ಲಾ ಧಿಕಾರಿ ಎನ್. ಪ್ರಕಾಶ್ ಅವರು ಇಂದು ಬೆಳಗ್ಗೆ ನಗ ರದ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆ ಯಲ್ಲಿ ಮಗು ವಿಗೆ ಪೋ ಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ದರು. ಮಂಗ ಳೂರು ಮೇಯರ್ ಶ್ರೀ ಮತಿ ಗುಲ್ಜಾರ್ ಭಾನು ಅವರು ಕಾರ್ಯ ಕ್ರಮ ವನ್ನು ಉದ್ಘಾ ಟಿಸಿ ದರು.
ಪಾಲಿಕೆ ಆಯುಕ್ತ ರಾದ ಡಾ. ಹರೀಶ್ ಕುಮಾರ್, ಜಿಲ್ಲಾ ಆರೋಗ್ಯಾ ಧಿಕಾರಿ ಡಾ. ಓ. ಶ್ರೀ ರಂಗಪ್ಪ, ರೋಟರಿ ಅಧ್ಯಕ್ಷ ಮಾಧವ ಸುವರ್ಣ, ವೆನ್ಲಾಕ್ ಆಸ್ಪತ್ರೆಯ ಅಧಿಕ್ಷಕಿ ಡಾ. ಪಿ. ಸರೋಜ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಬಾರಿ ಜಿಲ್ಲೆ ಯಲ್ಲಿ
0-5 ವರ್ಷ ದೊಳ ಗಿನ 1,63,860 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದ ಲಾಗಿದೆ. ಸಾರ್ವ ತ್ರಿಕ ಲಸಿಕಾ ಕಾರ್ಯ ಕ್ರಮದ ಹಿನ್ನೆಲೆ ಯಲ್ಲಿ ಜಿಲ್ಲೆ ಯಾದ್ಯಂತ 921 ಲಸಿಕಾ
ಕೇಂದ್ರ ಗಳು ಹಾಗು 11 ಸಂಚಾರಿ ತಂಡ ಮತ್ತು 27 ಟ್ರಾನ್ಸಿಟ್ ತಂಡ
ರೂಪಿಸ ಲಾಗಿದೆ.ಮಕ್ಕಳಿಗೆ ಲಸಿಕೆ ನೀಡಲು 3,822 ಲಸಿಕೆ ನೀಡು ವವರು ಹಾಗು 193
ಮೇಲ್ವಿ ಚಾರ ಕರನ್ನು ನಿಯೋಜಿಸಲಾಗಿದೆ .
ಈ ಬಾರಿ 2,319 ವಲಸೆ
ಕಾರ್ಮಿ ಕರ ಮಕ್ಕ ಳನ್ನು ಲಸಿಕೆ ನೀಡಲು ಗುರು ತಿಸ ಲಾಗಿದೆ. ಇಂದಿನ ಪಲ್ಸ್ ಪೋಲಿಯೋ ಕಾರ್ಯ ಕ್ರಮದ ಬಳಿಕ ನಗರ ಪ್ರದೇಶ ದಲ್ಲಿ ಮೂರು ದಿನ ಹಾಗು ಗ್ರಾಮೀಣ
ಪ್ರದೇಶ ದಲ್ಲಿ ಎರಡು ದಿನ ಕಾರ್ಯ ಕರ್ತರು ಮನೆ ಮನೆ ಭೇಟಿ ನೀಡಲಿ ದ್ದಾರೆ.ಈ
ಕಾರ್ಯಕ್ರಮದಲ್ಲಿ 598 ಆರೋಗ್ಯ ಸಿಬ್ಬಂದಿಗಳು,2092 ಆರೋಗ್ಯ ಕಾರ್ಯಕರ್ತೆಯರು,961ಆಶಾ
ಕಾರ್ಯಕರ್ತೆಯರು,80 ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.



