ಮಂಗಳೂರು, ಜನವರಿ.28: ಪಣಂಬೂರಿನ ಕಡಲ ಕಿನಾರೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಬೀಚ್ ಉತ್ಸವ ಭಾನುವಾರ ಸಂಪನ್ನಗೊಂಡಿತು. ಇಲ್ಲಿ ಆಯೋ ಜಿಸಲಾ ಗಿದ್ದ ಸಮಾ ರೋಪ ಸಮಾ ರಂಭದ ಅಧ್ಯ ಕ್ಷತೆ ವಹಿಸಿ ಮಾತ ನಾಡಿದ ಶಾಸಕ ಕೃಷ್ಣ ಜೆ . ಪಾಲೇ ಮಾರ್ ಬೀಚ್ ಉತ್ಸ ವದ ಯಶಸ್ಸಿಗೆ ದುಡಿದ ಅಧಿಕಾರಿ ವರ್ಗ , ಸಂಘ ಸಂಸ್ಥೆಗಳು ಮತ್ತು ಪ್ರೋತ್ಸಾಹ ನೀಡಿದ ಜನತೆಯನ್ನು ಅಭಿನಂದಿಸಿದರು. ನೆರೆಯ ಕೇರಳ, ಗೋವಾ ರಾಜ್ಯಗಳು ಪ್ರವಾಸೋದ್ಯಮದಿಂದಲೇ ಆರ್ಥಿಕವಾಗಿ, ಸಾಮಾಜಿವಾಗಿ ಅಭಿವೃದ್ದಿ ಹೊಂದುತ್ತಿವೆ, ಸಾವಿರಾರು ಉದ್ಯೋಗ ಅವಕಾಶಗಳು ಲಭಿಸುತ್ತಿವೆ.ಕರ್ನಾಟಕ ರಾಜ್ಯವೂ ಬೃಹತ್ ಕರಾವಳಿಯನ್ನು ಹೊಂದಿದ್ದು , ಇದನ್ನು ಹಂತ ಹಂತವಾಗಿ ಅಭಿವೃದ್ದಿ ಪಡಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.ಮಂಗಳೂರು ಮೇಯರ್ ಶ್ರೀಮತಿ ಗುಲ್ಜಾರ್ ಭಾನು, ಜಿಲ್ಲಾಧಿಕಾರಿ ಎನ್. ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್.ವಿಜಯ ಪ್ರಕಾಶ್,ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಸಹಾಯಕ ಆಯುಕ್ತ ಡಾ. ವೆಂಕಟೇಶ್ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯ ಕ್ರಮದ ಬಳಿಕ ನಡೆದ ಸಾಂಸ್ಕೃ ತಿಕ ಕಾರ್ಯ ಕ್ರಮ ದಲ್ಲಿ ನವ ದೆಹಲಿ ಯ ಡಾ. ಪಲಶ್ ಸೇನ್ ಅವರ ನೇತ್ರ ತ್ವದ ಯುಪೋ ರಿಯಾ ರಾಕ್ ಬ್ಯಾಂಡ್ ಸಂಗೀತ ಸುಧೆ ಯಲ್ಲಿ ಜನ ಸಾಗರ ವನ್ನು ತೇಲಾ ಡಿಸಿತು.