Monday, January 7, 2013

ಬಹುದೂರದ ಮತ್ತು ಒಳನಾಡು ಪ್ರದೇಶಾಭಿವೃದ್ಧಿ ಪ್ರಗತಿ ದಾಖಲಿಸಲು ಕಾಲಮಿತಿ ನಿಗದಿ


ಮಂಗಳೂರು, ಜನವರಿ.07 :ಬೆಳ್ತಂಗಡಿ ಸುತ್ತಮುತ್ತಲ ಬಹುದೂರದ ಮತ್ತು ಒಳನಾಡು ಪ್ರದೇಶಾಭಿವೃದ್ಧಿಯಡಿಜಿಲ್ಲೆಗೆ ಈಗಾಗಲೇ ಬಿಡುಗಡೆಯಾಗಿರುವಅನುದಾನವನ್ನು ವ್ಯಯಿಸಿ ಸಮಯಮಿತಿಯೊಳಗೆ ಕಾಮಗಾರಿಗಳನ್ನು ಮುಗಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು ಸೂಚಿಸಿದರು.
         ಇಂದು ಜಿಲ್ಲಾಧಿ ಕಾರಿ ಗಳ ಅಧ್ಯ ಕ್ಷತೆ ಯಲ್ಲಿ ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ನಡೆದ ಸಭೆ ಯಲ್ಲಿ ಕಾಮ ಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಕಾಮಗಾರಿ ಪ್ರಗತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಪ್ರಸಕ್ತ ವಿಷಯವನ್ನು ಪ್ರಮುಖ ಆದ್ಯತೆಯನ್ನಾಗಿಸಿ ಜನವರಿ ಮಾಸಾಂತ್ಯದೊಳಗೆ ಪ್ರಗತಿ ದಾಖಲಿಸಿ ಎಂದು ಎಚ್ಚರಿಕೆ ನೀಡಿದರು.
           ಈಗಾಗಲೇ ಆಡಳಿತಾತ್ಮಕ ಅನುಮೋದನೆ ಪಡೆದಿರುವ ಕಾಮಗಾರಿಗಳಲ್ಲೂ ವಿಳಂಬ ಕಾರಣತನಗರ್ಥವಾಗದ್ದು ಎಂದ ಜಿಲ್ಲಾಧಿಕಾರಿಗಳು, ಈ ಕಾಮಗಾರಿಗಳನ್ನು ತುರ್ತಾಗಿ ಮುಗಿಸಲು ಕ್ರಮಕೈಗೊಳ್ಳಿ ಎಂದರು.
20 ಪ್ರಮುಖ ಸಿವಿಲ್ ಕಾಮಗಾರಿಗಳಡಿ ಕೇವಲ ಮೂರು ಕಾಮಗಾರಿಗಳು ಮುಗಿದಿದ್ದು, 17 ಕಾಮಗಾರಿ ಬಾಕಿ ಇದೆ.ಈ ಮಾದರಿ ಕಾಮಗಾರಿ ಪ್ರಶಂಸಿಸಲು ಸಾಧ್ಯವಿಲ್ಲ; ಅಧಿಕಾರಿಗಳು ಈ ಸಂಬಂಧಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸಿದರೆ ತಾನು ಸಹಿಸುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು.
     2 ಕೋಟಿ 51 ಲಕ್ಷ ರೂ.ಗಳ ಕ್ರಿಯಾಯೋಜನೆಯಡಿಗುರುತಿಸಲಾದ ಕಾಮಗಾರಿಗಳನ್ನು ಪುನರ್ ಪರಿಶೀಲಿಸಿ ವರದಿ ನೀಡಲು ಸಂಯುಕ್ತ ಸಮೀಕ್ಷೆ ನಡೆಸಲು ಸೂಚಿಸಿದಂತೆ ಕೆಲವು ಕಾಮಗಾರಿಗಳನ್ನು ಕೈಬಿಡಲಾಗಿದೆ.ಕೆಲವು ಕಾಮಗಾರಿಗಳನ್ನು ಪುನರ್ ರೂಪಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
       ನಿರ್ಮಿತಿ ಕೇಂದ್ರದಿಂದಕೈಗೊಂಡಿರುವ ಸಿವಿಲ್ ಕಾಮಗಾರಿಗಳನ್ನು ತುರ್ತಾಗಿ ಮುಗಿಸಲು ಜಿಲ್ಲಾ ಪಂಚಾಯತ್ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಸೂಚಿಸಿದರು.ಇಂಜಿನಿಯರಿಂಗ್ ವಿಭಾಗ ಉಳಿದ ಕಾಮಗಾರಿಗಳಂತೆ ಈ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿಗಣಿಸದೆಗಂಭೀರವಾಗಿತೆಗೆದುಕೊಂಡುಕಾರ್ಯೋನ್ಮುಖರಾಗುವಂತೆಯೂ ಸೂಚನೆ ನೀಡಿದರು.
   ಹತ್ತು ದಿನಗಳಿಗೊಮ್ಮೆ ಕಾಮಗಾರಿ ಪ್ರಗತಿ ವರದಿ ನೀಡುವಂತೆಸಮಿತಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸ್ಥಳೀಯ ಪೊಲೀಸ್, ಕಂದಾಯ ಮತ್ತುಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸಿಕೊಳ್ಳುವಂತೆಯೂ ಜಿಲ್ಲಾಧಿಕಾರಿಗಳು ಹೇಳಿದರು.
  ಇದೇ ಪ್ರದೇಶದಲ್ಲಿ ನೆರೆ ಪರಿಹಾರದಡಿ ಬಿಡುಗಡೆಯಾದ 41 ಲಕ್ಷ ರೂ.ಗಳ ಕಾಮಗಾರಿ ಪ್ರಗತಿ ವರದಿ ನೀಡಿಎಂದು ಜಿಲ್ಲಾಧಿಕಾರಿಗಳು ಹೇಳಿದರು.ಉಪಕಾರ್ಯದರ್ಶಿ ಶಿವರಾಮೇಗೌಡ ಸ್ವಾಗತಿಸಿದರು.ಅಪರ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.