ಮಂಗಳೂರು.ಜುಲೈ.11:ಪರಿಸರ ರಕ್ಷಣೆಗೆ ಇಲಾಖೆಯ ಮೂಲಕ ವಿಶೇಷ ಒತ್ತು ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 2 ಲಕ್ಷ ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ 20 ಸಾವಿರ ಸಸಿಗಳನ್ನು ನೆಡುವ ಗುರಿ ಪ್ರಸಕ್ತ ಸಾಲಿನಲ್ಲಿ ಹೊಂದಲಾಗಿದೆ ಎಂದು ರಾಜ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜೆ.ಕೃಷ್ಣ ಪಾಲೆಮಾರ್ ಹೇಳಿದ್ದಾರೆ.
ಕರ್ನಾ ಟಕ ಅರಣ್ಯ ಇಲಾಖೆ ಮಂಗ ಳೂರು ವಿಭಾಗ ಮತ್ತು ಮಹಾ ನಗರ ಪಾಲಿಕೆ, ಸಾರ್ವ ಜನಿಕ ಶಿಕ್ಷಣ ಇಲಾಖೆ, ಪ್ರಾಯೋ ಜಕತ್ವ ದಲ್ಲಿ ಮಂಗ ಳೂರು ನಗರ ಹಸು ರೀಕರಣ ಅಭಿಯಾ ನದ ಅಂಗ ವಾಗಿ ಸೋಮ ವಾರ ನಗರದ ಪುರ ಭವನ ದಲ್ಲಿ ಸೋಮ ವಾರ ನಡೆದ `ವನ ಮಹೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯ ಕ್ರಮಕ್ಕೆ ಮುನ್ನ ಸಚಿವರುಕೇಂದ್ರ ಮೈದಾನದ ಬದಿಯಲ್ಲಿ ಸಸಿ ಗಳನ್ನು ನೆಡುವ ಕಾರ್ಯ ಕ್ರಮದಲ್ಲಿ ಪಾಲ್ಗೊಂಡರು. ಪ್ರಕೃತಿ ಯನ್ನು ಆರಾಧಿಸುವ ಹಬ್ಬ ಅನಾದಿಯಿಂದ ನಮ್ಮಲ್ಲಿ ನಡೆದುಕೊಂಡು ಬಂದಿದೆ. ಇಂದು ಈ ಬಗ್ಗೆ ಜಾಗೃತಿಯ ಅವಶ್ಯ ಕತೆಯಿದೆ. ಪರಿಸರ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಿದ್ದು ವಿದ್ಯಾ ರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾ ಇಲಾಖೆಗೆ ಅಗತ್ಯ ಅನುದಾನ ನೀಡಲು ಸಿದ್ಧ ಎಂದರು.ನದಿ ತೀರಗಳಲ್ಲಿ 4 ಲಕ್ಷ ಕಾಂಡ್ಲಾ ಗಿಡ ಗಳನ್ನು ನೆಡಲಾಗುತ್ತಿದೆ. ನಗರ ವ್ಯಾಪ್ತಿ ಯಲ್ಲೂ ಸ್ವಚ್ಚ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
ಘನತ್ಯಾಜ್ಯ ವಿಲೇವಾರಿ ನಗರದಲ್ಲಿ ಸಮರ್ಪಕವಾಗಿ ಆಗಬೇಕು. ಬೃಹತ್ ವಸತಿ ಸಮುಚ್ಚಯಗಳಲ್ಲಿ ಬಳಸುವ ನೀರನ್ನು ಮರು ಬಳಕೆ ಮಾಡುವಂತೆ ಯೋಜನೆ ರೂಪಿಸಬೇಕು. ಮುಂದೆ ಬೃಹತ್ ಕಟ್ಟಡ ನಿರ್ಮಾಣದ ಸಂದರ್ಭ ಈ ನಿಯಮವನ್ನು ಪಾಲಿಸುವಂತೆ ಪಾಲಿಕೆ ಮೂಲಕ ಕಟ್ಟಡ ಮಾಲಿಕರಿಗೆ ಸೂಚನೆ ನೀಡಲಾಗುವುದು ಎಂದು ಪಾಲೆಮಾರ್ ಹೇಳಿದರು.ತಣ್ಣೀರು ಬಾವಿ ಮತ್ತು ಪಣಂಬೂರು ಬೀಚ್ ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಆದೇಶ ಜಾರಿ ಮಾಡಲಾಗುವುದು. ಈ ಪ್ರದೇಶದಲ್ಲಿ ಪ್ಲಾಸ್ಟಿಕೆ ಬಳಕೆ ಮಾಡುವುದು ಕಂಡುಬಂದಲ್ಲಿ ಅಂತವರ ಮೇಲೆ ರೂ.500 ದಂಡ ವಿಧಿಸಲಾಗುವುದು. ಜನತೆ ಸ್ವಚ್ಛತೆಯತ್ತ ಗಮನ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಹೇಳಿದರು.
ವಿಧಾನ ಸಭಾ ಉಪಸಭಾದ್ಯಕ್ಷ ಎನ್.ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಜಿ.ಪಂ.ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಉಪಮೇಯರ್ ಗೀತಾ ನಾಯಕ್, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಡಿ.ವಿ.ಮೋಹನ್ ದಾಸ್, ಅರಣ್ಯ ಸಂರಕ್ಷಣಾಧಿಕಾರಿ ಶಾಂತಪ್ಪ, ಡಿಡಿಪಿಐ ಮೋಸೆಸ್ ಜಯಶೇಖರ್ ಮುಖ್ಯ ಅತಿಥಿಗಳಾಗಿದ್ದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಓ.ಪಾಲಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಆಯುಕ್ತ ಡಾ.ಕೆ.ಎನ್.ವಿಜಯ ಪ್ರಕಾಶ್ ಸ್ವಾಗತಿಸಿದರು.
ಸಭೆ ಆರಂಭಕ್ಕೆ ಮುನ್ನ ರೋಶನಿ ನಿಲಯದ ಎನ್ಎಸ್ಎಸ್ ವಿದ್ಯಾರ್ಥಿಗಳು ಪರಿಸರ ಜಾಗೃತಿಯ ಕಾರ್ಯಕ್ರಮ ನಡೆಸಿಕೊಟ್ಟರು.