ಮಂಗಳೂರು,ಜುಲೈ.25: ಇದೇ ಆಗಸ್ಟ್ 15ರಿಂದ ಎಲ್ಲ ಗ್ರಾಮಗಳ ಕಸ ಆಯಾ ಗ್ರಾಮಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯಾರಂಭವಾಗ ಬೇಕು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಹೊಣೆ ಹೊರಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.ಅವ ರಿಂದು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನೀರು ಮತ್ತು ನೈ ರ್ಮಲ್ಯ ಸಮಿತಿ ಸಭೆ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಸ್ವಚ್ಛತೆ ಸಂಬಂಧ ಹಲವು ಮಾದರಿ ಗಳನ್ನು ನೀಡಿ ರುವ ಹಾಗೂ ಪ್ರಶಸ್ತಿ ಯನ್ನು ಪಡೆ ದಿರುವ ದಕ್ಷಿಣ ಕನ್ನಡ ಜಿಲ್ಲೆ ಸ್ವಚ್ಛತೆ ಯಲ್ಲಿ ನಿರಂತ ರತೆ ಯನ್ನು ಸಾಧಿ ಸಲು ಕಾರ್ಯೋ ನ್ಮುಖ ವಾಗ ಬೇಕೆಂದ ಜಿಲ್ಲಾಧಿಕಾರಿಗಳು, ಘನತ್ಯಾಜ್ಯ ವಿಲೇವಾರಿ ಘಟಕಗಳ ಅನುಷ್ಟಾನ ಮತ್ತು ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಗ್ರಾಮಪಂಚಾಯತ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಾಗದ ಸಮಸ್ಯೆ, ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಎಸೆದು ಹೋಗುವ ಬಗ್ಗೆ, ಮನೆಗಳಿಂದ ಕಸ ವಿಭಜನೆಯಾಗದೆ ಕಸ ವಿಭಜಿಸಲು ಪಡುತ್ತಿರುವ ತ್ರಾಸಗಳನ್ನು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು. ನಿರ್ದಿಷ್ಟ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸೂಕ್ತ ಪರಿಹಾರವನ್ನು ಸಭೆಯಲ್ಲಿ ಸೂಚಿಸಿದರು.
ಗ್ರಾಮಪಂಚಾಯತ್ ಗಳಲ್ಲಿ ನಿರ್ಮಿಸಲಾಗಿರುವ ಪ್ಲಾಸ್ಟಿಕ್ ಸೌಧಗಳನ್ನು ಈಗಿರುವ ಡಂಪ್ ಯಾರ್ಡಗಳನ್ನಾಗಿ ಪರಿವರ್ತಿಸದೆ ಸದ್ಬಳಕೆ ಮಾಡಿದರೆ ಆ ಪ್ಲಾಸ್ಟಿಕ್ ವಿಲೇ ಹೊಣೆಯನ್ನು ಜಿಲ್ಲಾಡಳಿತ ವಹಿಸಲಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಪುನರ್ ಬಳಕೆ ಮಾಡಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗು ವುದು ಎಂದರು. ಜನರಿಗೆ ಕಸ ವಿಲೇ ಬಗ್ಗೆ ಇನ್ನಷ್ಟು ಮಾಹಿತಿ, ಶಿಕ್ಷಣ ಹಾಗೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದ ಅವರು, ಇಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ಜಿಲ್ಲಾ ಮಟ್ಟದ ಪರಿಣಿತರ ಸಮಿತಿ ರಚಿಸುವುದಾಗಿ ನುಡಿದರು.
ಕಸದ ಬಗ್ಗೆ ಜನರು ಸ್ಪಂದಿಸಲು ನಿರಾಕರಿಸಿದರೆ ಪಿಡಿಒ ಗಳು ನೋಟೀಸ್ ಜಾರಿ ಮಾಡಬಹುದು ಎಂದ ಜಿಲ್ಲಾಧಿಕಾರಿಗಳು, ತಾಲೂಕು ಮಟ್ಟದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ವರದಿ ಬಾರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳು ಒಂದು ವಾರದೊಳಗಾಗಿ ತಾಲೂಕುಗಳ ನೀರು ಸರಬರಾಜು ವ್ಯವಸ್ಥೆ ಬಗ್ಗೆ ವರದಿ ನೀಡಬೇಕೆಂದು ಆದೇಶಿಸಿದರು.
ವಾರ್ಡ್ ವಾರು ಸ್ವಚ್ಛತಾ ಸಮಿತಿ ಮಾಡಿ ಈ ಸಭೆಗಳು ಸಕ್ರಿಯವಾಗಿರುವ ಬಗ್ಗೆ ವರದಿ ಕಳುಹಿಸಲೂ ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಲ್ಲೆಯ
ಧರ್ಮಸ್ಥಳ, ಸುಬ್ರಹ್ಮಣ್ಯ,ಕಟೀಲು, ಉಪ್ಪಿನಂಗಡಿ ಇಂತಹ ಪುಣ್ಯ ಕ್ಷೇತ್ರಗಳಲ್ಲಿ ನದಿಯ ನೀರು ಮಲಿನವಾಗುತ್ತಿರುವ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿ ನೀಡದಿರುವ ಅಧಿಕಾರಿಗಳ ನಿರಾಸಕ್ತಿಯ ಬಗ್ಗೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.
153 ಶಾಲೆಗಳಲ್ಲಿ ಶೌಚಾಲಯ ಇಲ್ಲ:ಜಿಲ್ಲೆಯ 933 ಶಾಲೆಗಳಲ್ಲಿ 176 ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಶೌಚಾಲಯವಿಲ್ಲ ಎಂಬುದನ್ನು ಶಿಕ್ಷಣಾಧಿಕಾರಿಗಳು ಸಭೆಯ ಗಮನಕ್ಕೆ ತಂದರಲ್ಲದೆ, ಸರ್ವಶಿಕ್ಷಣ ಅಭಿಯಾನದಡಿ 176ರಲ್ಲಿ 23 ಶಾಲೆಗಳಿಗೆ ಶೌಚಾಲಯ ಮಂಜೂರಾಗಿದ್ದು, ಉಳಿದ 153 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ವಾಗಬೇಕಿದೆ ಎಂದರು. ಈ ನಿಟ್ಟಿನಲ್ಲಿ ಒಂದು ವಾರದೊಳಗೆ ಸಮಸ್ಯೆ ಪರಿಹಾರ ಸೂಚಿಸುವುದಾಗಿ ನುಡಿದರು.
ಪಂಚತಂತ್ರದಡಿ ರೇಷನ್ ಕಾರ್ಡ್ ಮ್ಯಾಚಿಂಗ್ ನಲ್ಲಿ ಶೇಕಡ 10ರಿಂದ 15 ಬಾಕಿ ಇದ್ದು ಈ ತಿಂಗಳಾಂತ್ಯದಲ್ಲಿ ಕ್ರಮಕೈಗೊಳ್ಳಲು ಸೂಚಿಸಿದರು. ತೆರಿಗೆ ವಿಧಿಸದ ಮನೆಗಳಿಗೆ ತೆರಿಗೆ ವಿಧಿಸಬೇಕು ಪಂಚಾಯತ್ ವ್ಯಾಪ್ತಿಯ ಆಸ್ತಿಗಳನ್ನು ಪಂಚತಂತ್ರದಲ್ಲಿ ಶೀಘ್ರವೇ ನಮೂದಿಸಲು ಪಿಡಿಒಗಳಿಗೆ ಸೂಚನೆ ನೀಡಿದರು. ಉಪಕಾರ್ಯದರ್ಶಿ ಶಿವರಾಮೇಗೌಡ, ಸಿಪಿಒ ನಝೀರ್, ಸಿ ಎ ಒ ರಾಮದಾಸ್ ಅವರು ಉಪಸ್ಥಿತರಿದ್ದರು.