ಮಂಗಳೂರು,ಜುಲೈ:14:ವಿಕೇಂದ್ರೀಕೃತ ವ್ಯವಸ್ಥೆ ಮತ್ತು ಜನರ ಪಾಲ್ಗೊಳ್ಳುವಿಕೆಯಿಂದ ಯೋಜನೆಗಳು ಯಶಸ್ವಿ ಎಂಬುದಕ್ಕೆ ಸಾಕ್ಷಿ ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲೆಯ ಹಲವೆಡೆ ವಿವಿಧ ಯೋಜನೆಗಳಡಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಿರುವ ಸಣ್ಣ ಸಣ್ಣ ಗುಡಿ ಕೈಗಾರಿಕೆಗಳು.
ಸ್ಥಳೀಯರ ಪಾಲ್ಗೊಳ್ಳುವಿಕೆಯನ್ನು ಕಡ್ಡಾಯಗೊಳಿಸಿ, ನಿರುದ್ಯೋಗ ಸಮಸ್ಯೆ ಪರಿಹರಿಸಲು ಹಾಗೂ ಸ್ವ ಉದ್ಯೋಗದಿಂದ ಕುಗ್ರಾಮದ ಜನರನ್ನು ಸಬಲೀಕರಿಸುವ ಯೋಜನೆ ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ಅಳಂಬೆಯಲ್ಲೂ ಆರಂಭಗೊಂಡಿದೆ. ಜಿಲ್ಲೆ ಯಲ್ಲಿ ಮುಡಿಪು ವಿನಲ್ಲಿ, ಸುಳ್ಯದ ದಾಸರ ಕೋಡಿ ಯಲ್ಲೂ ತರ ಬೇತಿ ಕೇಂದ್ರ ಗಳನ್ನು ಆರಂಭಿ ಸಲಾ ಗಿದೆ. ಉಳಿದೆ ಡೆಗ ಳಿಂದ ವಿಶೇಷ ವಾಗಿ ಗಮನ ಸೆಳೆ ಯುವುದು ಕುತ್ಲೂರಿ ನ ಅಳಂಬ-ಕುರಿ ಯಾಡಿಯ ಕೈ ಮಗ್ಗ ತರ ಬೇತಿ ಕೇಂದ್ರ. ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಲ್ಪಟ್ಟಿದ್ದ ಈ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಿಂದ ಜನರು ವಂಚಿತವಾಗಿದ್ದಾರೆ. ಇವರನ್ನು ಸಮಾಜಮುಖಿಗಳನ್ನಾಗಿ ಮಾಡಲು ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ರೂಪಿಸಿತ್ತು. ಇವುಗಳಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ರೂಪಿಸಿದ ಯೋಜನೆಗೆ ಸ್ಥಳೀಯರಿಂದ ಪೂರಕ ಸಹಕಾರ ಲಭಿಸಿದ್ದು ಸರ್ಕಾರಿ ಯೋಜನೆ ಇಲ್ಲಿ ಯಶಸ್ವಿಯಾಗಿದೆ. ಕುದುರೆ ಮುಖ ರಕ್ಷಿತಾ ರಣ್ಯದ ವ್ಯಾಪ್ತಿಗೆ ಬರುವ ಇಲ್ಲಿ ವಾಸಿ ಸುವ ಮಲೆ ಕುಡಿಯ ಜನಾಂಗ ದವ ರಿಗೆ ಯಾವುದೇ ಮೂಲ ಭೂತ ಸೌಕರ್ಯ ಗಳಿಲ್ಲ. ಅವರಿಗೆ ಇಂತಹ ಅಗತ್ಯ ಗಳ ಪೂರೈ ಕೆಗೆ ಕನಿಷ್ಠ 7-8 ಕಿ.ಮೀ ನಡೆದು ಬರಲೇಬೇಕು. ಆಹಾರ ಹಾಗೂ ಇತರೆ ಸಾಮಗ್ರಿಗಳಿಗಾಗಿ 12 ಕಿ.ಮೀ ದೂರದಲ್ಲಿರುವ ನಾರಾವಿ ಅಥವಾ ಅಳದಂಗಡಿಗೆ ಬರಬೇಕು. ಆದರೆ ತಿಂಗಳ 13ನೇ ತಾರೀಖು ಸಂಚಾರಿ ಪಡಿತರ ಸಾಮಗ್ರಿ ಒದಗಿಸುವ ವ್ಯವಸ್ಥೆ ಇಲ್ಲಿದ್ದು ಆ ವಾಹನದಿಂದ ಆಹಾರ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು. ತಪ್ಪಿದರೆ ಮತ್ತು 12 ಕಿ.ಮೀ ಸಾಗುವ ದೂರ ಅನಿವಾರ್ಯ.
ಮಲೆಕುಡಿಯರೇ ವಾಸಿಸುತ್ತಿರುವ ಈ ಪ್ರದೇಶಗಳಲ್ಲಿ ಜೀವನ ನಿರ್ವಹಣೆಗೆ ಇವರು ಕಾಡುತ್ಪತ್ತಿಗಳನ್ನು ಹಾಗೂ ಬುಟ್ಟಿ ಹೆಣೆಯುವಿಕೆಯನ್ನು ನೆಚ್ಚಿದ್ದರು. ಆದರೆ ಇಲಾಖೆಯು ಸುವರ್ಣವಸ್ತ್ರ ಯೋಜನೆಯಡಿ ಒಂದೂವರೆ ಲಕ್ಷ ರೂ. ನಿಮರ್ಾಣ ವೆಚ್ಚ ಮತ್ತು ತರಬೇತಿ ವೆಚ್ಚ ಸೇರಿ ಒಟ್ಟು 3ಲಕ್ಷ 72,000 (6 ತಿಂಗಳ ಅವಧಿಗೆ) ವ್ಯಯಿಸಿದ್ದು, ಯೋಜನೆ ಯಶಸ್ವಿಯಾಗಿದೆ. ಸ್ಥಳೀಯರ ಸಹಕಾರದೊಂದಿಗೆ ಆರಂಭಿಸಿದ ಕೈಮಗ್ಗ ತರಬೇತಿ ಕೇಂದ್ರ ಸ್ಥಳೀಯರ ಜೀವನ ಶೈಲಿಯನ್ನು ಬದಲಿಸಿದೆ. ಸ್ಥಳೀಯ ಪ್ರದೇಶಗಳ ಪಾಂಜಾಳ, ಸುಲ್ಕೇರಿ, ನಾಯಿದಗುರಿ, ಅಲೆಕ್ಕಿ, ಕಲ್ಲಾಜೆಯ 20 ಮಂದಿ ತರಬೇತಿಗೆ ಸೇರ್ಪಡೆಗೊಂಡವರಲ್ಲಿ 18 ಜನರು ತರಬೇತಿ ಪಡೆಯುತ್ತಿದ್ದು, ಇವರಲ್ಲಿ ನಾಲ್ಕು ಗಂಡು ಮಕ್ಕಳು. ಇಬ್ಬರು ತರಬೇತಿಯನ್ನು ಅರ್ಧದಲ್ಲೇ ಕೈಬಿಟ್ಟಿದ್ದಾರೆ. ಉಳಿದವರು ಆರು ತಿಂಗಳ ತರಬೇತಿಗೆ ಸೇರ್ಪಡೆಗೊಂಡಿದ್ದು ನಾಲ್ಕನೇ ತಿಂಗಳ ತರಬೇತಿ ಪಡೆಯುತ್ತಿದ್ದಾರೆ; ಖುಷಿಯಾಗಿದ್ದಾರೆ.ಎಲ್ಲದ ಕ್ಕಿಂತಲೂ ಸಂತ ಸದ ಸಂಗತಿ ಯೆಂದರೆ ಈ ಯೋಜನೆ ಯಿಂದ ಯಾರೂ ನಿರ್ವಸಿ ತರಾಗಿಲ್ಲ; ಪರಿಸ ರಕ್ಕೆ ಧಕ್ಕೆ ಯಾಗಿಲ್ಲ, ಸ್ಥಳೀ ಯರನ್ನು ನಿರ್ಲಕ್ಷಿಸಿದ ಆರೋಪಗಳಿಲ್ಲ. ಸ್ಥಳೀಯ ವೆಂಕಪ್ಪಣ್ಣ ಮತ್ತು ಸಾವಿತ್ರಿಯಕ್ಕನ ಮನೆಯ ಬದಿಯಲ್ಲೇ ನೆಲವನ್ನು ಸಮತಟ್ಟು ಮಾಡಿ ಸೆಗಣಿ ಸಾರಿಸಿದ ನೆಲ, ತೆಂಗಿನ ಗರಿ, ಟರ್ಪಲ್ ನಿಂದ ಮುಚ್ಚಿದ ಈ ಕೇಂದ್ರ ಸ್ಥಳೀಯರನ್ನು ಸಬಲಗೊಳಿಸಿದೆ. ಸ್ಥಳೀಯರಿಗೆ ಶಿಕ್ಷಣದ, ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಸಾವಿತ್ರಿಯಕ್ಕನ ಮಗ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.
ತರಬೇತಿ ಪಡೆದ ಬಳಿಕ ಪ್ರತಿಯೊಬ್ಬರು ಪ್ರತಿದಿನ 150 ರೂ. ಆದಾಯ ಗಳಿಸಬಹುದಾಗಿದ್ದು, ಒಬ್ಬರು ಒಂದು ದಿನಕ್ಕೆ ಮೂರು ಲುಂಗಿ, ನಾಲ್ಕು ಬೆಡ್ ಷೀಟ್ ನೇಯಲು ಸಾಧ್ಯ ಎನ್ನುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕ ಯೋಗೀಶ್ ಕುಮಾರ್ ಅವರು. ತರಬೇತಿ ಪಡೆದವರನ್ನು ಅರ್ಧದಲ್ಲೇ ಕೈಬಿಡದೆ ಆರು ತಿಂಗಳ ತರಬೇತಿ ಬಳಿಕ ತರಬೇತಿ ಪಡೆದವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ದುಡಿಮೆ ಬಂಡವಾಳ ಮತ್ತು ಮನೆ ಕಟ್ಟಿಸಿಕೊಳ್ಳಲು ವೈಯಕ್ತಿಕವಾಗಿ ಲಿವಿಂಗ್ ಕಮ್ ವರ್ಕ್ ಷೆಡ್ ಗಳನ್ನು ನಿರ್ಮಿಸಲು 40,000 ರೂ. ಸಹಾಯಧನ 20,000 ರೂ. ಸಾಲವನ್ನು ಶೇ. 9ರ ಬಡ್ಡಿ ದರದಲ್ಲಿ 6 ತಿಂಗಳಿಗೊಮ್ಮೆ 20 ಕಂತಿನಲ್ಲಿ 10 ವರ್ಷ ಪಾವತಿಸುವ ಯೋಜನೆಯೂ ಇದೆ. ಇಲ್ಲಿ ಮೊದಲನೇ ತರಬೇತಿ ತಂಡ ಫೆಬ್ರವರಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ತರಬೇತಿ ಅವಧಿಯಲ್ಲಿ ಇವರಿಗೆ ತಿಂಗಳಿಗೆ 2,000 ರೂ. ಸ್ಟೈಫಂಡ್ ನೀಡಲಾಗುವುದು. ಇಲಾಖೆಯಿಂದಲೇ ತರಬೇತಿ ಪಡೆದು ಪರಿಣತರಾಗಿ ಸ್ಥಳೀಯವಾಗಿದ್ದುಕೊಂಡು ತರಬೇತಿ ನೀಡುವವರನ್ನು ಶಿಕ್ಷಕರನ್ನಾಗಿ ನೇಮಿಸಲಾಗುವುದು. ತರ ಬೇತಿ ಪಡೆದ ವರಿಗೆ ಮಹಾತ್ಮ ಗಾಂಧಿ ಬಂಕರ್ ವಿಮಾ ಯೋಜನೆ ಯಡಿ ವರ್ಷಕ್ಕೆ 40 ರೂ. ಕಟ್ಟಿ ದರೆ ಅವರ ಎರಡು ಮಕ್ಕ ಳಿಗೆ ವಾರ್ಷಿಕ ಎರಡು ಮಕ್ಕ ಳಿಗೆ 2,400 ರೂ.ಗಳಂತೆ ಪ್ರತಿ ಮಗುವಿಗೆ 1,200 ರೂ., ವಿದ್ಯಾರ್ಥಿ ವೇತನ ನೀಡ ಲಾಗು ವುದು .ಆಕ ಸ್ಮಿಕ ಮರಣ ಅಥವಾ ಅಪ ಘಾತ ಸಂಭ ವಿಸಿದರೆ ತಲಾ ಒಂದು ಲಕ್ಷ ರೂ.ಗಳ ವಿಮಾ ಪರಿಹಾರ ಧನ ದೊರೆಯುವುದು ಎಂದು ಯೋಗೀಶ್ ಮಾಹಿತಿ ನೀಡಿದರು.
ಇನ್ನು ನೇಕಾರರ ಕಲ್ಯಾಣ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್, ವೈದ್ಯಕೀಯ ಪರಿಹಾರ ಮೊತ್ತ ಗರಿಷ್ಠ 50,000 ರೂ.ಗಳವರೆಗೆ ಮರುಪಾವತಿ ಮಾಡಲಾಗುವುದು. ಐಸಿಐಸಿಯ ಲ್ಯಾಂಬಾರ್ಡ ಆರೋಗ್ಯ ವಿಮಾ ಯೋಜನೆಯಡಿ ವರ್ಷಕ್ಕೆ 50 ರೂ. ಕಟ್ಟಿದರೆ 15,000 ರೂ.ಗಳ ವೈದ್ಯಕೀಯ ವೆಚ್ಚದ ಮರುಪಾವತಿ ಮಾಡಲಾಗುವುದು. ಒಂದು ಕುಟುಂಬದ 4 ಜನರು ವಿಮೆಯ ಲಾಭ ಪಡೆಯಬಹುದು.
ತರಬೇತಿ ಪಡೆದವರಿಗೆ ಇನ್ನಷ್ಟು ಉತ್ತಮ ಅವಕಾಶ ಸೃಷ್ಟಿಸಲು ಅನುಕೂಲವಾಗುವಂತೆ ಹೊರರಾಜ್ಯಗಳಿಗೆ ಅಧ್ಯಯನ ಪ್ರವಾಸ ಕರೆದೊಯ್ಯುವ ಯೋಜನೆಯೂ ಇದೆ. ಈ ಕೇಂದ್ರಗಳಲ್ಲಿ ತರಬೇತಿ ಪಡೆಯಲು ಸ್ಥಳೀಯರಾಗಿರಬೇಕು. ಆಸಕ್ತಿಯಿರಬೇಕು, ನಿರುದ್ಯೋಗಿಗಳಾಗಿರಬೇಕು ಎಂಬ ನಿಬಂಧನೆಗಳು ಮಾತ್ರ.ಎಸ್ ಕೆ ಆರ್ ಡಿ ಪಿ ಉಜಿರೆ ಮತ್ತು ಮಿಜಾರು ನೇಕಾರರ ಸಹಕಾರಿ ಸಂಘದವರು ಈ ತರಬೇತಿ ಪಡೆಯುತ್ತಿರುವ ಫಲಾನುಭವಿಗಳು ಉತ್ಪಾದನೆ ಚಟುವಟಿಕೆ ಆರಂಭಿಸಿದಾಗ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಮುಂದೆ ಬಂದಿರುತ್ತಾರೆ.
ಇಲಾಖೆ ಕೈಮಗ್ಗ ವೃತ್ತಿಯಲ್ಲಿ ಪಳಗಿದವರು ವಿದ್ಯುತ್ ಮಗ್ಗ ಹಾಕಲು ಮುಂದಾದರೆ ವೆಚ್ಚದ ಶೇ. 50ರಷ್ಟು ಗರಿಷ್ಠ ಒಂದು ಲಕ್ಷ ರೂ. ಸಹಾಯಧನವನ್ನು ಸರ್ಕಾರದಿಂದ ನೀಡಲು ಯೋಜಿಸಲಾಗಿದೆ.