ಮಂಗಳೂರು, ಮೇ. 22 :-ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯು.ಪಿ.ಒ.ಆರ್.ಯೋಜನೆಯಡಿ 28,200 ಆಸ್ತಿಯ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ನಗರ ಮಾಪನ ಯೋಜನಾಧಿಕಾರಿ ಬಿ.ಕೆ. ಕುಸುಮಾಧರ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 32 ಗ್ರಾಮಗಳಲ್ಲಿ ಯು.ಪಿ.ಓ.ಆರ್.(ಅರ್ಬನ್ ಪ್ರಾಪರ್ಟಿ ಒನರ್ಶಿಪ್ ರೆಕಾರ್ಡ್)ಯೋಜನೆ ಯಶಸ್ಸಿನಿಂದ ಸಾಗುತ್ತಿದ್ದು,ಬಾಕಿ ಉಳಿದ ಖಾತೆದಾರರು ತಮ್ಮ ದಾಖಲೆಗಳನ್ನು ಆದಷ್ಟು ಶೀಘ್ರ ಯೋಜನಾಧಿಕಾರಿ,ನಗರ ಮಾಪನ ಯೋಜನೆ,1ನೇ ಮಹಡಿ,ಸರಕಾರಿ ನೌಕರರ ಸಂಘದ ಕಟ್ಟಡ, ಹಳೆ ತಾಲೂಕು ಕಚೇರಿ ಹಿಂಬದಿ, ಮಂಗಳೂರು ಇವರಿಗೆ ಸಲ್ಲಿಸಬಹುದು.
2013 ಸೆಪ್ಡೆಂಬರ್ ಅಂತ್ಯದೊಳಗೆ ಉಳಿದ 70,000 ಆಸ್ತಿಗಳ ಅಳತೆ ಕಾರ್ಯ ಪೂರ್ಣಗೊಳ್ಳಲಿದೆ ಎಂದಿರುವ ಅವರು ಕ್ರಯ/ವಿಭಾಗ/ವ್ಯವಸ್ಥೆ ಅಥವಾ ಇತರೆ ದಸ್ತಾವೇಜು ಪತ್ರ /ಪಹಣಿ ಖಾತೆ/ಮನೆ ತೆರಿಗೆ ರಶೀದಿ/ಸ್ವಯಂ ಘೋಷಿತ ಆಸ್ತಿ ತೆರಿಗೆ ರಶೀದಿ/ಜಮೀನಿಗೆ ಸಂಬಂಧಿಸಿದ ಇತರೆ ಪೂರಕ ದಾಖಲೆಗಳನ್ನು ಒದಗಿಸುವಂತೆ ಕೋರಿದ್ದಾರೆ.
ಯು.ಪಿ.ಓ.ಆರ್. ಯೋಜನೆ ಬಹುತೇಕ ಯಶಸ್ವಿಯಾಗಿದ್ದು,ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಥಳಕ್ಕೆ ಬಂದು ಸಿಬ್ಬಂದಿಯವರಲ್ಲಿ ಅಥವಾ ನಗರ ಮಾಪನ ಕಚೇರಿಗೆ ಬಂದು ನೀಡಿ ಸಹಕರಿಸಬೇಕೆಂದು ಯೋಜನಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ 0824-4266222 ಸಂಪರ್ಕಿಸಿ ಪಡೆಯಬಹುದಾಗಿದೆ.