ಮಂಗಳೂರು.ಮೇ.19 :- ಪೆರ್ನೆ ಅನಿಲ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಎಚ್ ಪಿ ಸಿ ಎಲ್ ಕಂಪೆನಿಯಿಂದ ತಲಾ 1.5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ ವೀರಪ್ಪ ಮೊಯಿಲಿ ಅವರು ಹೇಳಿದರು.
ಅವ ರಿಂದು ನಗರದ ಸರ್ಕಿಟ್ ಹೌಸ್ ನಲ್ಲಿ ಜಿಲ್ಲಾ ಧಿಕಾರಿ ಗಳೊಂದಿಗೆ ಸಭೆ ನಡೆಸಿ ಪೆರ್ನೆ ದುರಂತ ದಲ್ಲಿ ಮಡಿ ದವರ ಕುಟುಂಬಕ್ಕೆ ಎಚ್ ಪಿ ಸಿ ಎಲ್ ಕಂಪೆನಿ ಯಿಂದ ತಲಾ 1.5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ ಕಂಪೆನಿ ಒಟ್ಟು 17 ಲಕ್ಷ ರೂ. ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದರು.
ಇದಲ್ಲದೆ ರಾಜ್ಯ ಸರ್ಕಾರ 48 ಲಕ್ಷ ರೂ.ಗಳ ಪ್ಯಾಕೇಜನ್ನು ದುರಂತ ಸಂಭವಿಸಿದ ಪ್ರದೇಶದಲ್ಲಿ ಸಮಗ್ರ ಪುನರ್ ವಸತಿಗೆ ಘೋಷಿಸಿದೆ.
ನಗರದ ಲೇಡಿಗೋಷನ್ ಆಸ್ಪತ್ರೆಗೆ ಇನ್ನೊಂದು ಹೈಟೆಕ್ ಬ್ಲಡ್ ಬ್ಯಾಂಕ್ ನೀಡುವ ಯೋಜನೆಯ ಬಗ್ಗೆಯೂ ಕೇಂದ್ರ ಸಚಿವರು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್, ಜಿಲ್ಲಾ ಪಂಚಾಯತ್ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.