ಮಂಗಳೂರು,
ಮೇ. 30: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು
ಹಂಗಾಮಿನಲ್ಲಿ ಸರಬರಾಜಾಗಿದ್ದ ಒಟ್ಟು 390 ಕ್ವಿಂಟಾಲ್ ಬಿತ್ತನೆ ಭತ್ತದಲ್ಲಿ ದಿನಾಂಕ
29-5-13 ರ ವರೆಗೆ 99.35 ಕ್ವಿಂಟಾಲ್, ಕೆಜಿ ಒಂದಕ್ಕೆ ರೂ.7/- ರ ರಿಯಾಯಿತಿ ದರದಲ್ಲಿ
247 ರೈತರಿಗೆ ವಿತರಿಸಲಾಗಿದೆಯೆಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ
ತಿಳಿಸಿದೆ. ಕರ್ನಾಟಕ ರಾಜ್ಯ ಬೀಜ ನಿಗಮದ ವತಿಯಿಂದ ಎಂಒ4- 290 ಕ್ವಿಂಟಾಲ್,ಜಯ 100
ಕ್ವಿಂಟಾಲ್ ಬಂದಿದೆ. ಉಳಿಕೆ 290.65 ಕ್ವಿಂಟಾಲ್ ದಾಸ್ತಾನಿನಲ್ಲಿದೆ.
ಮಂಗಳೂರು ತಾಲೂಕಿನ ಮಂಗಳೂರು,ಮೂಲ್ಕಿ,ಸುರತ್ಕಲ್,ಗುರುಪುರ,ಮೂಡಬಿದ್ರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಜಯ ಭತ್ತ -60 ಕ್ವಿಂಟಾಲ್,ಎಂಒ4 -155 ಕ್ವಿಂಟಾಲ್ ಸೇರಿದಂತೆ ಒಟ್ಟು 215 ಕ್ವಿಂಟಾಲ್ ದಾಸ್ತಾನು ಇದ್ದು,ಇದರಲ್ಲಿ 62.25 ಕ್ವಿಂಟಾಲ್ ವಿತರಿಸಲಾಗಿದೆ.
ಬಂಟ್ವಾಳ ತಾಲೂಕಿನ ಬಂಟ್ವಾಳ ಪಾಣೆಮಂಗಳೂರು ವಿಟ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಜಯ- 25 ಕ್ವಿಂಟಾಲ್ ಎಂಒ4- 50 ಕ್ವಿಂಟಾಲ್ ಸೇರಿದಂತೆ ಒಟ್ಟು 75 ಕ್ವಿಂಟಾಲ್ ಬಂದಿದ್ದು ಇಲ್ಲಿಯ ವರೆಗೆ 15.50 ಕ್ವಿಂಟಾಲ್ ವಿತರಿಸಲಾಗಿದ್ದು ಊಲಿಕೆ 59.50 ಕ್ವಿಂಟಾಲ್ ದಾಸ್ತಾನು ಇದೆ.
ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ,ಕೊಕ್ಕಡ,ವೇಣೂರು ರೈತ ಸಂಪರ್ಕ ಕೇಂದ್ರಗಳಿಗೆ ಜಯ -10 ಕ್ವಿಂಟಾಲ್,ಎಂಒ4- 40 ಕ್ವಿಂಟಾಲ್ ಸೇರಿ 50 ಕ್ವಿಂಟಾಲ್ ಸರಬರಾಜಾಗಿದ್ದು,ಇದರಲ್ಲಿ 11.60 ಕ್ವಿಂಟಾಲ್ ವಿತರಿಸಿದ್ದು,ಉಳಿಕೆ 38.40 ಕ್ವಿಂಟಾಲ್ ದಾಸ್ತಾನಿನಲ್ಲಿದೆ.
ಪುತ್ತೂರು ತಾಲೂಕಿನ ಪುತ್ತೂರು,ಕಡಬ,ಉಪ್ಪಿನಂಗಡಿ ರೈತ ಸಂಪರ್ಕ ಕೇಂದ್ರಗಳಿಗೆ ಎಂಒ4- 30 ಕ್ವಿಂಟಾಲ್ ಮಾತ್ರ ಸರಬರಾಜಾಗಿದ್ದು,ಅದರಲ್ಲಿ 4.50 ಕ್ವಿಂಟಾಲ್ ವಿತರಿಸಲಾಗಿ ಉಳಿಕೆ 25.50 ಕ್ವಿಂಟಾಲ್ ಲಭ್ಯವಿದೆ.
ಸುಳ್ಯ ತಾಲೂಕಿನ ಸುಳ್ಯ ಮತ್ತು ಪಂಜ ರೈತ ಸಂಪರ್ಕ ಕೇಂದ್ರಗಳಿಗೆ ಜಯ- 5 ಕ್ವಿಂಟಾಲ್ ಮತ್ತು ಎಂಒ4-15 ಕ್ವಿಂಟಾಲ್ ಸೇರಿ ಒಟ್ಟು 20 ಕ್ವಿಂಟಾಲ್ ಸರಬರಾಜಾಗಿದ್ದು,ಇಲ್ಲಿಯ ವರೆಗೆ 5 ಕ್ವಿಂಟಾಲ್ ವಿತರಿಸಿ ಉಳಿಕೆ 15.0 ಕ್ವಿಂಟಾಲ್ ದಾಸ್ತಾನಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.