ಮಂಗಳೂರು,ಮೇ.06 :- ದಕ್ಷಿಣಕನ್ನಡ ಜಿಲ್ಲೆಯಲ್ಲಿ ರಾಜ್ಯ ವಿಧಾನಸಭೆಗೆ ಮೇ 5 ರಂದು ನಡೆದ ಸಾರ್ವತ್ರಿಕ ಚುನಾವಣೆಯು ಅತ್ಯಂತ ಸುವ್ಯವಸ್ಥಿತವಾಗಿ ಹಾಗೂ ಶಾಂತಿಯುತವಾಗಿ ನಡೆದಿದ್ದು, ಮತದಾರರು ಮತದಾನದ ಹಕ್ಕನ್ನು ಗೌರವಿಸಿದ್ದಾರೆ. ಕಳೆದ ಸಾಲಿನಲ್ಲಿ ಒಟ್ಟು 9,74,288 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರೆ ಪ್ರಸಕ್ತ ಸಾಲಿನಲ್ಲಿ 11,18,025 ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಒಟ್ಟು 1,43,737 ಅಧಿಕ ಮತದಾರರು ಮತ ಚಲಾಯಿಸುವ ಮೂಲಕ ಅತ್ಯಂತ ಪ್ರಶಂಸನೀಯ ಮತದಾನವಾಗಿದೆ. ಪ್ರಥಮ ಹಂತದಲ್ಲಿ 62,000 ಅರ್ಜಿಗಳನ್ನು ಸ್ವೀಕರಿಸಿ ನೋಂದಾಯಿಸಲಾಗಿದ್ದು,ಜನರು ತಮ್ಮ ಹಕ್ಕಿನ ಬಗ್ಗೆ ಹೆಚ್ಚು ಜಾಗ್ರತರಾಗಿದ್ದಾರೆ. ನೈತಿಕ ಮತದಾನಕ್ಕೆ ಪ್ರಾಶಸ್ತ್ಯದ ಜೊತೆಗೆ ಶಾಂತಿಯುತ ಮತದಾನ ಜಿಲ್ಲೆಯಲ್ಲಿ ದಾಖಲಾಗಿದೆ. ಜಿಲ್ಲೆಯಲ್ಲಿ 11,18,025 ಒಟ್ಟು ಮತ ಚಲಾವಣೆಯಾಗಿದ್ದು, ಇದು ಜಿಲ್ಲೆಯಲ್ಲಿ ಸ್ವಿಪ್ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಕಾರಣವಾಗಿದೆ.
ಕಳೆದ 2008ರ ವಿಧಾನಸಭಾ ಚುನಾವಣೆಯಲ್ಲಿ ಇದ್ದ ಒಟ್ಟು 13,33,092 ಮತದಾರರ ಪೈಕಿ 9,79,288 ಮತದಾರರು ಮತ ಚಲಾಯಿಸಿದ್ದರೆ,ಈ ಬಾರಿ ಹೆಚ್ಚುವರಿಯಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಸುಮಾರು 56,000 ಮತದಾರರು ಸೇರಿದಂತೆ ಒಟ್ಟು ಮತದಾರರ ಸಂಖ್ಯೆ 15,01,024 ಆಗಿತ್ತು.
ಕಳೆದ ಬಾರಿಗಿಂತ ಈ ಬಾರಿಯು 72,713 ಮಹಿಳಾ ಮತದಾರರು ಮತ ಚಲಾಯಿಸುವ ಮೂಲಕ ದಾಖಲೆ ಮಾಡಿದ್ದಾರೆ. ಕಳೆದ ಬಾರಿ ಪುರುಷರು 4,83,520 ಮತದಾರರು ಮತ ಚಲಾಯಿಸಿದ್ದರೆ 2013 ಮೇ 5 ರಂದು ನಡೆದ ಚುನಾವಣೆಯಲ್ಲಿ 5,54,544 ಮತದಾರ ಪುರುಷರು ಮತ ಚಲಾಯಿಸಿದ್ದಾರೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 1,28,577 ಮತದಾರರು ಮತ ಚಲಾಯಿಸಿದ್ದರೆ ಈ ಬಾರಿ 1,45,594 ಮತ ಚಲಾಯಿಸಿದ್ದಾರೆ.
ಮೂಡಬಿದ್ರೆ ಕ್ಷೇತ್ರದಲ್ಲಿ ಕಳೆದ ಬಾರಿ 1,10,531 ಮತದಾರರು ಮತ ಚಲಾಯಿಸಿದ್ದರೆ ಈ ಬಾರಿ 1,28,241 ಮತದಾರರು ಮತ ಚಲಾಯಿಸಿದ್ದಾರೆ.
ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,31,468 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,45,238 ಮತದಾರರು ಮತ ಚಲಾಯಿಸಿದ್ದಾರೆ.
ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,18,430 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,32,177 ಮತದಾರರು ಮತ ಚಲಾಯಿಸಿದ್ದಾರೆ.
ಮಂಗಳೂರು ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,04,329 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,2
4,205 ಮತದಾರರು ಮತ ಚಲಾಯಿಸಿದ್ದಾರೆ.
ಬಂಟ್ವಾಳ ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,34,853 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,55,750 ಮತದಾರರು ಮತ ಚಲಾಯಿಸಿದ್ದಾರೆ.
ಪುತ್ತೂರು ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,22,941 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,41,746 ಮತದಾರರು ಮತ ಚಲಾಯಿಸಿದ್ದಾರೆ.
ಸುಳ್ಯ ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,23,159 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,45,074 ಮತದಾರರು ಮತ ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಸ್ವಿಪ್ ಕಾರ್ಯಕ್ರಮದಿಂದ ಹೆಚ್ಚು ಮತದಾರರು ಜಾಗೃತಿ ಹೊಂದಿ ಮತದಾನ ಮಾಡಿರುವುದು.