ಮಂಗಳೂರು, ಮೇ.1 : ಮೇ 5 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ 2013ರ
ಚುನಾವಣೆಯಂದು ಅರ್ಹ ಮತದಾರರು ಮತದಾನ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗ ಮನೆ
ಮನೆಗೆ ಬಿಎಲ್ ಓಗಳ ಮೂಲಕ ವೋಟರ್ ಸ್ಲಿಪ್ ವಿತರಿಸಲಿದ್ದು, ಈ ಸ್ಲಿಪ್ನ್ನು ಗುರುತಿನ
ಚೀಟಿಯಾಗಿ ಬಳಸಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಬಿಎಲ್ಓಗಳು ನೀಡುವ ವೋಟರ್ ಸ್ಲಿಪ್
ಮಾತ್ರ ಅಧಿಕೃತವಾಗಿದ್ದು, ರಾಜಕೀಯ ಪಕ್ಷಗಳು ವಿತರಿಸುವ ವೋಟರ್ ಸ್ಲಿಪ್ನ್ನು ಗುರುತಿನ
ಚೀಟಿಯಾಗಿ ಬಳಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾ
ಅಧಿಕಾರಿಯಾಗಿರುವ ಹರ್ಷಗುಪ್ತ ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಎಪ್ರಿಲ್ 30 ರಿಂದ ವೋಟರ್ ಸ್ಲಿಪ್ ನ್ನು ಮನೆ ಮನೆಗೆ ವಿತರಿಸಲು ಬಿಎಲ್ಓಗಳು ಆರಂಭಿಸಿದ್ದು, ಮೇ 3 ರೊಳಗೆ ಎಲ್ಲರ ಮನೆಗೂ ವೋಟರ್ ಸ್ಲಿಪ್ ತಲುಪಲಿದೆ. ವೋಟರ್ ಸ್ಲಿಪ್ ಸಿಗದಿದ್ದರೆ ಸಂಬಂಧಪಟ್ಟ ಬಿಎಲ್ಓಗಳನ್ನುಅರ್ಹಮತದಾರರು ತಕ್ಷಣವೇ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.