ಮಂಗಳೂರು ಮೇ 16:- ಮಳೆಗಾಲ ಎದುರಿಸಲು ಮಹಾನಗರಪಾಲಿಕೆ
ಸಜ್ಜಾಗಬೇಕಿದ್ದು, ನಗರದ ಚರಂಡಿಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು ಮೇ 25ರೊಳಗೆ
ಸಂಪೂರ್ಣಗೊಳಿಸಬೇಕೆಂದು ಪಾಲಿಕೆ ಆಡಳಿತಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಎನ್ ಪ್ರಕಾಶ್ ಸೂಚಿ ಸಿದ್ದಾರೆ.
ಅವರು ಬುಧ ವಾರ ಮಹಾ ನಗರ ಪಾಲಿಕೆ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ಅಭಿ ವೃದ್ಧಿ ಸಭೆ ಯನ್ನು ಉದ್ದೇ ಶಿಸಿ ಮಾತ ನಾಡು ತ್ತಿದ್ದರು. ನೆರೆ ಪೀಡಿತ ಪ್ರದೇಶ ಗಳನ್ನು ಈಗಾ ಗಲೇ ಗುರು ತಿಸ ಲಾಗಿದ್ದು, ಮಳೆ ಗಾಲವನ್ನು ಎದುರಿಸಲು 10 ತಂಡಗಳ ಟಾಸ್ಕ್ ಫೋರ್ಸ ನ್ನು ರಚಿಸಲಾಗಿದೆ ಎಂದು ಪಾಲಿಕೆ ಮುಖ್ಯ ಅಧೀಕ್ಷಕ ಇಂಜಿನಿಯರ್ರಾದ ಬಿ ಎಸ್ ಬಾಲಕೃಷ್ಣ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಪಾಲಿಕೆಯಲ್ಲಿ ಈಗಾಗಲೇ 71 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಮಳೆಗಾಲದಲ್ಲಿ ಐದು ವಾರ್ಡಗೆ ಒಂದು ತಂಡ, ರಾತ್ರಿಗೆ ಹೆಚ್ಚುವರಿ 3 ತಂಡಗಳನ್ನು ಸಜ್ಜುಗೊಳಿಸಲಾಗಿದ್ದು, 24 ಗಂಟೆಯೂ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಲಿದೆ. ಈ ತಂಡಗಳ ನೇತೃತ್ವವನ್ನು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ ಅವರು ವಹಿಸಲಿದ್ದಾರೆ. ಪಾಲಿಕೆಗೆ ಪ್ರಥಮ ಹಂತದಲ್ಲಿ ಬಂದ ನೂರು ಕೋಟಿ ರೂ.ಗಳಲ್ಲಿ 12 ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಬಾಲಕೃಷ್ಣ ಅವರು ವಿವರಿಸಿದರು.
ದ್ವಿತೀಯ ಹಂತದ ನೂರು ಕೋಟಿ ರೂ. ಪಾಲಿಕೆ ಕಾಮ ಗಾರಿ ಯಲ್ಲಿ 15.4 ಕೋಟಿ ರೂ. ಬಿಡು ಗಡೆ ಯಾಗಿದ್ದು, 42 ಕಾಮ ಗಾರಿ ಗಳು ಬಾಕಿ ಉಳಿ ದಿವೆ. ನಿರ್ಮಿತಿ ಕೇಂದ್ರಕ್ಕೆ ಫುಟ್ಪಾತ್ ಹಾಗೂ ಚರಂಡಿ ಕಾಮ ಗಾರಿಯನ್ನು ನಿರ್ವ ಹಿಸಲು ವಹಿಸ ಲಾಗಿದೆ ಎಂದರು.
ಕಳೆದ ಮೂರು ತಿಂಗಳಿಂದ ಚುನಾವಣಾ ಕಾರಣ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಚುನಾವಣಾ ಕೆಲಸದಂತೆಯೇ ಪರಿಗಣಿಸಿ ಕ್ಷಿಪ್ರಗತಿಯಲ್ಲಿ ಸಂಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದ ಹಾಗೂ ಅತ್ಯಂತ ನಿಧಾನವಾಗಿ ಕಾಮಗಾರಿ ನಡೆಸುವ ಗುತ್ತಿಗೆದಾರರ ಟೆಂಡರ್ ನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ವನಿತಾವನಕ್ಕೆ 20 ಲಕ್ಷ ರೂ. ಮೀಸಲಿರಿಸಿದೆ ಎಂಬ ಮಾಹಿತಿಯನ್ನು ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ನೀಡಿದರು. ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ ಕಂದಾಯ ವಸೂಲಿ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹಿಸಲಾಗಿಲ್ಲ ಎಂದ ಪಾಲಿಕೆ ಆಯುಕ್ತರು, ಆರೋಗ್ಯ ಮತ್ತು ಕಸ ವಿಲೇ, ಘನತ್ಯಾಜ್ಯ ವಿಲೇ ಯೋಜನೆಯಂತೆ ಅನುಷ್ಟಾನಕ್ಕೆ ಬರುತ್ತಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮನೆ ನಿರ್ಮಾಣದಲ್ಲಿ ಪಾಲಿಕೆ ಒಂದು ತಿಂಗಳೊಳಗೆ ತನ್ನ ಗುರಿ ಸಾಧಿಸಬೇಕೆಂದ ಜಿಲ್ಲಾಧಿಕಾರಿಗಳು, ಮತ್ತೆ 15 ದಿನಗಳಲ್ಲಿ ಈ ಸಂಬಂಧ ಆದ ಅಭಿವೃದ್ಧಿಯನ್ನು ಪರಿಶೀಲನೆ ನಡೆಸುವುದಾಗಿ ಹೇಳಿದರು.
ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಇಂಜಿನಿಯರ್ ಗಳು ಕಾಮಗಾರಿ ಅನುಷ್ಠಾನದಲ್ಲಿ ಉದಾಸೀನತೆ ತೋರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.
ಸಭೆಯಲ್ಲಿ ಪಾಲಿಕೆ ಇಂಜಿನಿಯರ್ ಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.