Tuesday, October 30, 2012

ಅಡ್ಡಾದಿಡ್ಡಿ ಪ್ಲಾಸ್ಟಿಕ್ ಕಸ ಹಾಕಿ ದಂಡ ತೆರದಿರಿ;ಡಾ. ಹರೀಶ್ ಕುಮಾರ್



ಮಂಗಳೂರು, ಅಕ್ಟೋಬರ್.30 : ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ಮಹತ್ಕಾರ್ಯವನ್ನು ದ.ಕ.ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದು,ಈ ದಿಸೆಯಲ್ಲಿ ನವೆಂಬರ್ 1ರಿಂದ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಗುವುದು.ನಂತರ ಡಿಸೆಂಬರ್ ಮಾಹೆಯಿಂದ  ಬಳಸಿ ಎಸೆಯುವ ಪ್ಲಾಸ್ಟಿಕ್ನ್ನು ಸಂಪೂರ್ಣವಾಗಿ ನಿಷೇಧಿಸಲಿದ್ದು, ಬಳಸುವವರು,ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದೆಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.                  ಅವರು ಇಂದು ತಮ್ಮ   ಕಚೇರಿ ಯಲ್ಲಿ ಈ ಸಂಬಂಧ ನಗರದ ವ್ಯಾಪಾ ರಸ್ಥರು,ಬಹು ಮಹಡಿ ಮಾಲೀ ಕರು,ನಿವಾ ಸಿಗಳ ಸಂಘದ ಪದಾ ಧಿಕಾರಿ ಗಳೊಂದಿಗೆ ಸಭೆ ನಡೆಸಿ ಅವರ ಸಲಹೆ ಗಳನ್ನು ಆಲಿ ಸಿದರು.
          ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡದವರಿಗೂ ದಂಡ ತಪ್ಪಿದ್ದಲ್ಲ ಎಂದ ಆಯುಕ್ತರು ಸಾರ್ವಜನಿಕರು ಇದು ನಮ್ಮ ಮಂಗಳೂರು ಎಂಬ ಭಾವನೆ ಬೆಳೆಸಿಕೊಂಡು ನಗರವನ್ನು ಸ್ವಚ್ಛ ಸುಂದರವನ್ನಾಗಿಡಲು ಸಹಕರಿಸುವಂತೆ ಕೋರಿದರು. ಇನ್ನು 2-3 ತಿಂಗಳಲ್ಲಿ ಇಡೀ ನಗರದ ಮನೆಮನೆಗಳಿಂದ ಮಹಾನಗರಪಾಲಿಕೆಯವರೇ ಕಸವನ್ನು ಸಂಗ್ರಹಿಸಲಿದ್ದು ,ನಗರದಲ್ಲಿರುವ ನಗರಪಾಲಿಕೆಯ 600 ಕಸ ಸಂಗ್ರಹಗಾರಗಳನ್ನು ತೆರವುಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ಮಂಗಳೂರು ನಗರವನ್ನು ತ್ಯಾಜ್ಯ ಮುಕ್ತ ಪ್ಲಾಸ್ಟಿಕ್ ಮುಕ್ತವ ನ್ನಾಗಿ ಸುವ ದಿಕ್ಕಿ ನಲ್ಲಿ ಇನ್ನು ಮುಂದೆ ಯಾವುದೇ ರಾಜಕೀಯ ಸಮಾ ವೇಶಗಳು ನಡೆ ಯುವಾಗ ಬಂಟಿಂಗ್ಸ್, ಪ್ಲೆಕ್ಸ್,ಬ್ಯಾನರ್ ಗಳನ್ನು ಅಳ ವಡಿಸು ವುದನ್ನು ಕಡ್ಡಾಯ ವಾಗಿ ನಿಷೇಧಿ ಸುವುದಾಗಿ ತಿಳಿಸಿದ ಆಯುಕ್ತರು ಸಾರ್ವಜನಿಕರು ವಾಣಿಜ್ಯೋದ್ಯಮಿಗಳು ಪರಿಸರ ಸ್ನೇಹಿಬಟ್ಟೆ, ಬ್ಯಾಗುಗಳನ್ನು,ಕೈಚೀಲಗಳನ್ನು ಅಂಗಡಿ/ಮಾರುಕಟ್ಟೆಗಳಿಗೆ ಹೋಗುವಾಗ ಜೊತೆಯಲ್ಲಿ ಕೊಂಡೊಯ್ಯುವುದನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ತಿಳಿಸಿದರು.
ಸಭೆಯಲ್ಲಿ ಜಂಟಿ ಆಯುಕ್ತ ಶ್ರೀಕಾಂತ ರಾವ್,ಸ್ಥಾಯಿ ಸಮಿತಿ ಅಧ್ಯಕ್ಷರು ಮುಂತಾದವರು ಹಾಜರಿದ್ದರು.