ಮಂಗಳೂರು,ಅಕ್ಟೋಬರ್.13: 'ನಾವು ಕೇವಲ ಲಾಭದ ಉದ್ದೇಶವನ್ನಿಟ್ಟುಕೊಂಡು ಸಂಘ ಸ್ಥಾಪಿಸಿದ್ದಲ್ಲ; ಸ್ವಾವಲಂಬಿಗಳಾಗಲು, ಒಗ್ಗಟ್ಟಿನಿಂದ ಬಾಳಲು ನಮ್ಮ ಸಂಘವನ್ನು ಸ್ಥಾಪಿಸಿದ್ದೇವೆ' ಇದು ಉಳಾಯಿಬೆಟ್ಟಿನ ಪೆರ್ಮಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಭದ್ರಾ ರಾವ್ ಅವರ ಸ್ಪಷ್ಟ ನುಡಿ.
ಅಕ್ಟೋ ಬರ್ 12, 20 12ಕ್ಕೆ ಅವರ ಸಂಘಕ್ಕೆ ಮೂರರ ಹರೆಯ. ಪ್ರೀತಿ ನಂದಿನಿ, ಜ್ಯೋತಿ ನಂದಿನಿ, ದೀಪ ನಂದಿನಿ ಎಂಬ ಮೂರು ಗುಂಪು ಗಳ ನ್ನೊಳ ಗೊಂಡ 45 ಜನರ ನ್ನೊಳ ಗೊಂಡ ಸ್ವ ಸಹಾಯ ಸಂಘದ ಉದ್ದೇಶ ಕೇವಲ ಸಾಲ ಕೊಡು ವುದಲ್ಲ. ಹೈನು ಗಾರಿ ಕೆಯನ್ನು ಪ್ರಮುಖ ಕಸುಬ ನ್ನಾಗಿ ಸಿಕೊಂಡಿ ರುವ ಕುಟುಂ ಬದ ಮಹಿಳೆ ಯರು ತಮ್ಮ ಹಸು ಗಳಿಗೆ ಉತ್ತಮ ಹಿಂಡಿಯನ್ನು ತಯಾರಿಸಲು ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಸಂಘದ ಅಂಗಳದೆದುರು ಒಟ್ಟು ಸೇರುತ್ತಾರೆ.
ಜೋಳ, ಗೋಧಿ, ಉಪ್ಪು, ತೌಡು(ಭತ್ತದ ಹೊಟ್ಟು), ಹೆಸರು, ತೊಗರಿ, ಉದ್ದು, ಲವಣ ಮಿಶ್ರಣ, ತೆಂಗಿನ ಹಿಂಡಿ, ನೆಲಕಡಲೆ ಹಿಂಡಿ, ರಾಗಿಯನ್ನೊಳಗೊಂಡಂತೆ 11 ಬಗೆಯ ಕಚ್ಚಾ ವಸ್ತುಗಳನ್ನು ಸೇರಿಸಿ ಮಿಶ್ರಣ ಮಾಡಿ ಸಮತೋಲಿತ ಪಶು ಆಹಾರ ತಯಾರಿಸುತ್ತಾರೆ. ತಯಾರಿಕಾ ವೆಚ್ಚ 15.50 ರೂ.ಗಳಾದರೆ ಮಾರಾಟ ವೆಚ್ಚ 17ರೂ. ಲಾಭ 1.50 ರೂ. ಆದರೂ ನಾವು ಬರಿ ಲಾಭಕ್ಕೋಸ್ಕರ ಪಶು ಆಹಾರ ತಯಾರಿಸುತ್ತಿಲ್ಲ; ಗುಣಮಟ್ಟಕ್ಕೆ ಪ್ರಥಮ ಆದ್ಯತೆ, ನಮ್ಮ ಪಶುಗಳಿಗೆ ಉತ್ತಮ ಸಮತೋಲಿತ ಆಹಾರ ದೊರೆಯುತ್ತದೆ. ವೈದ್ಯರಿಗೆ ನೀಡುವ ಹಣ ಖರ್ಚಾಗುವುದಿಲ್ಲ ಎನ್ನುತ್ತಾರೆ ಈ ಮಹಿಳೆಯರು. ನಾವು ಎಲ್ಲರೂ ಒಗ್ಗಟ್ಟಿನಿಂದ, ಪ್ರೀತಿಯಿಂದ ದುಡಿಯುತ್ತೇವೆ ಎನ್ನುತ್ತಾರೆ.
ಕೇವಲ 6000 ರೂ. ರಿವಾ ಲ್ವಿಂಗ್ ಫಂಡ್(Revo lving fund) ನಿಂದ ಆರಂ ಭಿಸಿದ ಸಂಘ ಪ್ರತೀ ಮೂರು ಗುಂಪಿ ನಿಂದ 4000 ರೂ. ಸಂಗ್ರಹಿಸಿ ಕಚ್ಚಾ ಪದಾರ್ಥ ತಂದು ಮಿಶ್ರಣ ತಯಾ ರಿಸಿ 3 ಟನ್ ಉತ್ಪಾ ದನೆಯಿಂದ ಆರಂಭ ವಾಗಿದ್ದು ಇಂದು 16 ಟನ್ ಪಶು ಆಹಾರ ಉತ್ಪಾದಿ ಸುತ್ತಿ ದ್ದೇವೆ. ಕಳೆದ 9 ತಿಂಗ ಳಲ್ಲಿ 74,000 ರೂ. ಲಾಭ ಗಳಿಸಿದ್ದೇವೆ ಎನ್ನುತ್ತಾರೆ ಶ್ರೀಮತಿ ರೋಸ್ ಮೇರಿ. ಬಂದ ಹಣದಲ್ಲಿ 50% ಉಳಿಸಿ 50% ಹಂಚಿಕೊಳ್ಳುತ್ತೇವೆ. ಪ್ರಸಕ್ತ ಎರಡು ಗಂಟೆಯ ಕೆಲಸಕ್ಕೆ 200 ರೂ. ದೊರೆಯುತ್ತದೆ. ಇದಲ್ಲದೆ ಸ್ವಸಹಾಯ ಸಂಘದ ಮೂಲಕ ಹುಲ್ಲು ಬೆಳೆಸುತ್ತಿದ್ದೇವೆ. ಇವರಿಗೆ ಇದಕ್ಕೆಲ್ಲ ಬೆಂಬಲವಾಗಿ ಮಾರ್ಗದರ್ಶಕರಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಮಂಡಳಿ ಅಧಿಕಾರಿ ಡಿ. ಎಸ್. ಹೆಗಡೆ ಅವರು ಕಾಲಕಾಲಕ್ಕೆ ಸಲಹೆ ನೀಡುತ್ತಾರೆ. ಇವರ ಪಶುಗಳ ಆರೈಕೆಗೆ ಬೆಂಬಲವಾಗಿ ಇಲ್ಲಿನ ಪಶುಪಾಲನಾ ಇಲಾಖೆಯ ಡಾ ವಸಂತ ಶೆಟ್ಟಿ ಇದ್ದಾರೆ. ಹಾಗಾಗಿ ನಮಗೆ ಈ ಕುರಿತು ಚಿಂತೆ ಇಲ್ಲ ಎನ್ನುವ ಇವರನ್ನು ಹುರಿದುಂಬಿಸಿ ಸಲಹೆ ನೀಡಲು ಕಳೆದ ಸಾಲಿನಲ್ಲಿ ಉತ್ತಮ ಹೈನುಗಾರಿಕೆ ಪ್ರಶಸ್ತಿಯನ್ನು ಕೆ ಎಂ ಎಫ್ ನಿಂದ ಪಡೆದ ರೈತ ಆಂಟನಿ ಡಿ' ಸೋಜಾ ಅವರಿದ್ದಾರೆ. ಹಾಗಾಗಿ ಸಂಘ ಸಮಗ್ರವಾಗಿ ಸಮೃದ್ಧಿಯಿಂದ ಮುಂದಡಿ ಇಡುತ್ತಿದೆ.
ನಂದಿನಿ ಯವರಿಗೆ ಹಸಿರು ಹುಲ್ಲಿನ ಅವಶ್ಯ ಕತೆ ಯಿದೆ. ಹಾಗಾಗಿ ಹಸಿ ಹುಲ್ಲಿಗೆ ಮಾರು ಕಟ್ಟೆ ಯಲ್ಲಿ ಮೋಸ ಇಲ್ಲ. ಹಾಗಾಗಿ ಸಂಘ ಈ ನಿಟ್ಟಿ ನಲ್ಲೂ ಗಂಭೀ ರವಾಗಿ ಚಿಂತಿಸಿ ಹುಲ್ಲು ಬೆಳೆ ಯಲು ಆರಂ ಭಿಸಿದೆ. 2005 ರಿಂದ 24 ಲೀಟರ್ ಹಾಲಿನಿಂದ ಆರಂಭಗೊಂಡ ಹಾಲು ಸಂಗ್ರಹ ಇಂದು 700 ಲೀಟರ್ ಗುಣಮಟ್ಟದ ಹಾಲನ್ನು ನೀಡುತ್ತಿದೆ. ಉತ್ತಮ ಪಶುಆಹಾರದಿಂದಾಗಿ 8.5 ಎಸ್ ಎನ್ ಎಫ್ ಜಿಡ್ಡಿನಂಶ ಹಾಲಿನಲ್ಲಿದೆ. ಸಂಘಟಿತರಾಗಿ ಮಹಿಳೆಯರು ಬೆಳೆಯುತ್ತಿದ್ದಾರೆ. ಹೈನುಗಾರಿಕೆಯಲ್ಲಿ ಯಶಸ್ಸನ್ನು ದಾಖಲಿಸಿದ ರೋಸ್ ಮೇರಿಯವರು, ಕೃಷಿಯಲ್ಲಿ ಯಶಸ್ಸು ಸಾಧಿಸುತ್ತಿರುವ ಸುಭದ್ರ ಅವರು ಇವರಿಗೆ ಮಾದರಿಯಾಗಿದ್ದಾರೆ. ಸ್ವಾವಲಂಬಿ ಹಳ್ಳಿಗಳಿಂದ ಸಮೃದ್ಧ ಭಾರತ ಎಂಬ ರಾಷ್ಟ್ರಪಿತ ಮಹತ್ಮಾ ಗಾಂಧಿಜೀ ಅವರ ಕನಸು ಈ ಮೂಲಕ ನನಸಾಗುತ್ತಿದೆ.