ಮಂಗಳೂರು,ಅಕ್ಟೋಬರ್. 30.: ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಜಿಲ್ಲಾಡಳಿತ
ಜಿಲ್ಲೆಯಲ್ಲಿ ಒಟ್ಟು 8 ಸುರಕ್ಷತಾ ವಲಯಗಳನ್ನು ಗುರುತಿಸಿದ್ದು, ಈ ಪ್ರದೇಶದಲ್ಲಿ
ಕ್ರಷರ್ ಆರಂಭಿಸಲು ಆಸಕ್ತಿ ಇರುವವರು ನವೆಂಬರ್ 5 ರೊಳಗೆ ಗಣಿ ಮತ್ತು ಭೂ ವಿಜ್ಞಾನ
ಇಲಾಖೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅಂತಿಮ
ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ಈ ಸಂ ಬಂಧ ನಡೆದ ಕಲ್ಲು ಪುಡಿ ಘಟಕ ನಿಯಂ ತ್ರಣ ಸಮಿತಿ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದ ಅವರು, ಈ ವರೆಗೆ ಈ ಸಂಬಂ ಧದ ಪ್ರ ಕ್ರಿಯೆ ಗಳನ್ನು ಪರಿ ಶೀಲಿ ಸಿದರು.
ಜಿಲ್ಲೆ ಯಲ್ಲಿ ಎಂಟು ಸು ರಕ್ಷತಾ ವಲಯ ಗಳನ್ನು ಗುರುತಿ ಸಲಾಗಿದೆ. ಇಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುವುದು. ಜಿಲ್ಲೆಯಲ್ಲಿ ಅಕ್ರಮವಾಗಿರುವ ಕ್ರಷರ್ ಗಳನ್ನು ಪತ್ತೆ ಹಚ್ಚಲು ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳು, ತಹಸೀಲ್ದಾರ್ರು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಹೊಣೆ ಹೊರಬೇಕೆಂದರು.
ಈಗಾಗಲೇ ಈ ಸಂಬಂಧದ ಸಮಗ್ರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ನವೆಂಬರ್ 10ರೊಳಗೆ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಐಎಡಿಬಿಗೂ ಈ ಪ್ರಕ್ರಿಯೆಯಲ್ಲಿ ಸಮಾನ ಹೊಣೆಗಾರಿಕೆಯಿದ್ದು, ಇಲಾಖೆಗಳ ಅಧಿಕಾರಿಗಳು ಹೊಣೆಯರಿತು ಕಾರ್ಯೋನ್ಮುಖರಾಗಿ ಎಂದರು. ಜಿಲ್ಲೆಯಲ್ಲಿ ಸುರಕ್ಷತಾ ವಲಯದಲ್ಲಿ ಕ್ರಷರ್ ಅಳವಡಿಸಲು 18 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಆಸಕ್ತರಿಗೆ ನವೆಂಬರ್ 5ರವರೆಗೆ ಅವಕಾಶ ನೀಡಲಾಗಿದೆ. ಇನ್ನು ಷರತ್ತಬದ್ಧವಾಗಿ ಗುರುತಿಸಿಕೊಂಡಿರುವ ಕೆಲವು ಪ್ರದೇಶಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಡಾ ರವೀಂದ್ರ, ಎಲ್ಲ ತಹಸೀಲ್ದಾರ್ ಗಳು, ಅಪರ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.