ಮಂಗಳೂರು ಅಕ್ಟೋಬರ್ 22:-ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜನವರಿ 2013 ರಂದು 18 ವರ್ಷ ತುಂಬುವವರು ಕಡ್ಡಾಯವಾಗಿ ಮತದಾರರ ಪಟ್ಟಿಗೆ ನಮೂನೆ 6 ರಲ್ಲಿ ಭರ್ತಿ ಮಾಡಿ ವಯಸ್ಸು,ವಿಳಾಸ,ದಾಖಲಾತಿಗಳೊಂದಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ತಿಳಿಸಿದರು.
ಅವರು ಇಂದು ಅಕ್ಟೋಬರ್ 22 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಾಲಾ ಕಾಲೇಜುಗಳಿಗೆ ನಮೂನೆ 6 ನ್ನು ಸರಬರಾಜು ಮಾಡಲಾಗಿದ್ದು,ಭರ್ತಿ ಮಾಡಿದ ನಮೂನೆಗಳನ್ನು ನವೆಂಬರ್ 30,2012ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಗೆ ಹಿಂತಿರುಗಿಸಬೇಕಾಗಿದೆ. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಹಾಗೂ ತಿದ್ದುಪಡಿ,ವರ್ಗಾವಣೆ ಅಪೇಕ್ಷಿಸಿ ಮನವಿ ಸಲ್ಲಿಸಬಹುದಾಗಿದೆ. ಬರವಣಿಗೆಯಲ್ಲಿಯೂ/ ಆನ್ಲೈನ್ನಲ್ಲಿಯೂ ಮತದಾರರ ಪಟ್ಟಿ ನೊಂದಾವಣೆಗೆ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್ ಸೈಟ್
karnataka.nic.in ವಿಳಾಸವನ್ನು ಸಂಪರ್ಕಿಸಬಹುದಾಗಿದೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮಂಗಳೂರು ನಗರ,ಉತ್ತರ ಮತ್ತು ದಕ್ಷಿಣ ವಿಧಾನಸಭಾ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆಯೆಂದು ಅಪರ ಜಿಲ್ಲಾಧಿಕಾರಿ ದಯಾನಂದ್ ಕೆ.ಎ. ಇವರು ಹಾಜರಿದ್ದ ಎಲ್ಲಾ ಇಲಾಖಾಧಿಕಾರಿಗಳಿಗೆ ವಿವರಿಸಿದರು. ವಿದ್ಯಾಂಗ ಇಲಾಖೆಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್, ಶಿಕ್ಷಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಫಿಲೋಮಿನಾ ಲೋಬೋ ಹಾಗೂ ಚುನಾವಣಾ ಶಾಖೆಯ ರಾಮಚಂದ್ರ ಉಪಸ್ಥಿತರಿದ್ದರು.
ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ಚುನಾವಣಾ ಶಾಖೆ 2220592,ಅಪರ ಜಿಲ್ಲಾಧಿಕಾರಿ ದಯಾನಂದ್ ಇವರ ಮೊಬೈಲ್ ಸಂಖ್ಯೆ 9449649019 ಹಾಗೂ ರಾಮಚಂದ್ರ 9880352194 ಇವರನ್ನು ಸಂಪರ್ಕಿಸಬಹುದಾಗಿದೆಯೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ನಮೂನೆ 6 ನ್ನು ಸಾರ್ವಜನಿಕರು ಹತ್ತಿರದ ಮತಗಟ್ಟೆಯಲ್ಲಿ ಪಡೆಯಬಹುದಾಗಿದೆ.