ಮಂಗಳೂರು ಅಕ್ಟೋಬರ್.02 : ವ್ಯಸನಮುಕ್ತ ಸಮಾಜ ಕಟ್ಟುವ ಹೊಣೆ ಎಲ್ಲರದ್ದೂ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕೆಂದು ವಿಧಾನಸಭಾ ಉಪಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಹೇಳಿದರು.
ಇಂದು ನಗರದ ಎಸ್ ಡಿ ಎಂ ಕಾನೂನು ಕಾಲೇಜಿನ ಪ್ರಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಾರ್ತಾ ಇಲಾಖೆ ಮತ್ತು ಜನಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಲಾದ ಪಾನಮುಕ್ತ ಬಂಧು ಕುಟುಂಬಗಳ ಸಮಾವೇಶ ಮತ್ತು ಉಚಿತ ವೈದ್ಯಕೀಯ ಶಿಬಿರ ಹಾಗೂ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಾತ್ಮ ಗಾಂಧಿ ಯವರ ಜೀವ ನವೇ ನಮಗೆ ಮಾದರಿ, ಗ್ರಾಮ ಸ್ವರಾಜ್ಯ ಮತ್ತು ಸ್ವಾವ ಲಂಬಿ ಬದು ಕಿಗೆ ಅವರ ಬದು ಕಿದ ರೀ ತಿಯೇ ನಮಗೆ ಪಾಠ. ಉತ್ತಮ ವ್ಯಕ್ತಿ ಯಿಂದ ಉತ್ತಮ ಕುಟುಂಬ. ಉತ್ತಮ ಕುಟುಂಬ ಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು,
ಇದೇ ದಿನ ನಮ್ಮ ದೇಶ ಕಂಡ ಅತ್ಯುತ್ತಮ ಪ್ರಧಾನಿ ಶ್ರೀ ಲಾಲ್ ಬಹಾದ್ದೂರು ಶಾಸ್ತ್ರಿ ಅವರ ಜನುಮದಿನವೂ ಹೌದು. ಅವರು ನಮ್ಮ ದೇಶಕ್ಕೆ ನೀಡಿದ 'ಜೈಜವಾನ್ ಜೈಕಿಸಾನ್' ಘೋಷಣೆ ಸರ್ವಕಾಲಿಕ ಎಂದೂ ಸ್ಮರಿಸಿದರು.
ವಿಶೇಷ ಆಹ್ವಾನಿ ತರಾಗಿದ್ದ ಮಂಗ ಳೂರು ಕ್ಷೇತ್ರದ ಶಾಸಕ ರಾದ ಯು ಟಿ ಖಾದರ್ ಅವರು ಮಾತ ನಾಡಿ, ಮದ್ಯ ಮುಕ್ತ ರಾಗಿ ಬದುಕು ರೂಪಿ ಸುವ ವರಿಗೆ ಸರ್ಕಾರ ವಿಶೇಷ ನೆರವು ನೀಡ ಬೇಕೆಂದರು. ಮಂಗ ಳೂರು ಮಹಾ ನಗರ ಪಾಲಿಕೆ ಮಹಾ ಪೌರ ರಾದ ಶ್ರೀ ಮತಿ ಗುಲ್ಜಾರ್ ಭಾನು ಮುಖ್ಯ ಅತಿಥಿ ಗಳಾ ಗಿದ್ದರು. ಎಸ್ ಡಿ ಎಂ ಕಾನೂನು ಕಾಲೇಜಿನ ಪ್ರಾಂಶು ಪಾಲ ರಾದ ಡಾ ಬಿ ಕೆ ರವೀಂದ್ರ, ಬಿಬಿಎಮ್ ಕಾಲೇಜಿನ ಪ್ರೊ. ದೇವರಾಜ್, ರತ್ನಾಕರ್ ಜೈನ್, ಟಿ ಸಂಪತ್ ಕುಮಾರ್, ರಾಘವ ಎಂ, ಪ್ರಶಾಂತ ಗಟ್ಟಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.
ಜನಜಾಗೃತಿ ವೇದಿಕೆಯ ಸದಾಶಿವ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆ ಆಯೋಜಿಸಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್ ಸಿ ಹೆಚ್ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಡಾ ರುಕ್ಮಿಣಿ ಅವರು, ಉತ್ತಮ ಮಾರ್ಗದರ್ಶಕರಿಂದ ಧನಾತ್ಮಕ ವಲಯಗಳು ಮನುಷ್ಯರ ಸುತ್ತ ನಿರ್ಮಾಣವಾಗುತ್ತದೆ. ಕಾಲ್ಪನಿಕ ಬದುಕು ಮತ್ತು ನೈಜ ಬದುಕಿನ ಬಗ್ಗೆ ಸ್ಪಷ್ಟತೆ ನಮ್ಮಲ್ಲಿ ಮೂಡಿದಾಗ ಎಲ್ಲ ವ್ಯಸನಗಳಿಂದ ಮುಕ್ತವಾದ ಸಮತೋಲನದ ಬದುಕು ನಮ್ಮದಾಗುತ್ತದೆ ಎಂದರು.
ಉತ್ತಮ ಆರೋಗ್ಯ ಎಂದರೆ ಮಾನಸಿಕ, ದೈಹಿಕ ಆರೋಗ್ಯ. ನಮ್ಮ ಇಚ್ಛಾಶಕ್ತಿಗಳು ಉತ್ತಮವಾಗಿದ್ದು, ಸ್ವಾವಲಂಬಿ ಬದುಕನ್ನು, ಸ್ವಾವಲಂಬಿಗಳನ್ನು ಮಾದರಿಯಾಗಿಟ್ಟುಕೊಂಡು ನಾವು ಬದುಕಿದಾಗ ಮದ್ಯಮುಕ್ತ ಬದುಕಿನ ಪಯಣದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ವಾರ್ತಾ ಇಲಾಖೆ ವತಿಯಿಂದ 'ಗಾಂಧಿ' ಚಲನಚಿತ್ರವನ್ನು ಈ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಶ್ರೀಧರ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.