ಮಂಗಳೂರು, ನವೆಂಬರ್.12:ವಾರ್ತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ವತಿಯಿಂಧ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಇಂದಿನಿಂದ ನವೆಂವೆರ್ 16 ರ ವರೆಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗಿದ್ದು, ಇಂದು ಬೆಳಗ್ಗೆ ನಗರದ ವಾರ್ತಾ ಇಲಾಖಾ ಕಚೇರಿಯ ಆವರಣದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ವಿಜಯ ಪ್ರಕಾಶ್ ಅವರು ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿದರು. ಈ ಸಂದ ರ್ಭದಲ್ಲಿ ಪ್ರವಾ ಸದ ವಿದ್ಯಾರ್ಥಿ ಗಳಿಗೆ ಶುಭ ಹಾರೈಸಿ ಮಾತ ನಾಡಿದ ಅವರು ದೇಶ ಸುತ್ತು ಕೋಶ ಓದು ಎಂಬ ನಾನ್ನು ಡಿಯಂ ತೆ ವಿದ್ಯಾರ್ಥಿ ಗಳು ಪ್ರವಾಸ ಗಳನ್ನು ಅನು ಭವಿಸಿ ಉತ್ತಮ ಮಾಹಿತಿ ಪಡೆಯು ವುದ ರೊಂದಿಗೆ ಜ್ಞಾನ ವೃದ್ದಿಸಿ ಕೊಳ್ಳಬೇಕೆಂದು ಕರೆ ನೀಡಿದ ಅವರು ಉತ್ತಮ ಪ್ರವಾಸ ಕಥನ ಬರೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.
ಒಂಬುಡ್ಸ್ ಮನ್ ಶೀನ ಶೆಟ್ಟಿ ಅವರು ಮಕ್ಕಳಿಗೆ ಶಿಕ್ಷಣದ ಮಹತ್ವ ಮತ್ತು ಸ್ವಚ್ಚತೆಯ ಮಹತ್ವದ ಬಗ್ಗೆ ವಿವರಿಸಿ ಉತ್ತಮ ಪ್ರವಾಸ ಕಥನ ಬರೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಭರವಸೆಯೊಂದಿಗೆ ಶುಭ ಹಾರೈಸಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಡೋ, ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫಡ್ ಲೋಬೊ, ಜನಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿ ವಿದ್ಯಾರ್ಥಿಗಳನ್ನು ಬೀಳ್ಕೊಟ್ಟರು.
ಐದು ದಿನಗಳ ಈ ಶೈಕ್ಷಣಿಕ ಪ್ರವಾಸದಲ್ಲಿ ಉಡುಪಿ,ಮಣಿಪಾಲ,ಕುದುರೆ ಮುಖ,ಬೆಂಗಳೂರು,ಮೈಸೂರು, ಮಡಿಕೇರಿ ಮುಂತಾದ ಕಡೆಗಳಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ವಿದ್ಯಾರ್ಥಿಗಳು ಸಂದರ್ಶಿಸಲಿದ್ದಾರೆ. ನವೆಂಬರ್ 14 ಮಕ್ಕಳ ದಿನಾಚರಣೆಯಂದು ವಿಧಾನ ಸೌಧದ ಮುಂಭಾಗಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಪ್ರವಾಸದ ವಿದ್ಯಾರ್ಥಿಗಳನ್ನು ಭೇಟಿಯಾಗಲಿದ್ದಾರೆ.