ಮಂಗಳೂರು,ನವೆಂಬರ್.22: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಫಲಗಳು ದೊರಕಿ ಅವನೂ ಸಹ ಎಲ್ಲರಂತೆ ಅಭಿವೃದ್ಧಿ ಹೊಂದ ಬೇಕೆಂಬುದೇ ಸರ್ಕಾರಗಳ ಮುಖ್ಯ ಉದ್ದೇಶ.ಈ ಉದ್ದೇಶ ಈಡೇರಿಕೆಗೆ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ನ ಜಿಲ್ಲಾ ಯೋಜನಾ ಸಮಿತಿಯು 2012-13ನೇ ಸಾಲಿಗೆ 36 ವಲಯಗಳ ಮೂಲಕ ವಿವಿಧ ಜನ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಅನುದಾನ ರೂ.7496.37 ಹಾಗೂ ಕೇಂದ್ರದ ಅನುದಾನ ರೂ.7420.11 ಲಕ್ಷ ಸೇರಿ ಒಟ್ಟು 14,91,648 ಲಕ್ಷ ರೂ.ಗಳ ವಾರ್ಷಿಕ ಯೋಜನೆ ತಯಾರಿಸಿ ಅನುಮೋದನೆಗೆ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆಯೆಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಜಾ ಭಟ್ ತಿಳಿಸಿದ್ದಾರೆ.
ಅವರು ಸೋಮ ವಾರ ಜಿಲ್ಲಾ ಪಂಚಾ ಯತ್ ನೇತ್ರಾವತಿ ಸಭಾಂ ಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡುತ್ತಿದ್ದರು.ಕಳೆದ ಸಾಲಿನ ವಾರ್ಷಿಕ ಯೋಜನೆಯ ರಾಜ್ಯ ಅನುದಾನಕ್ಕಿಂತ ಮುಂದಿನ ಆರ್ಥಿಕ ವರ್ಷಕ್ಕೆ ರೂ.4919.43 ಲಕ್ಷಗಳ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾಪಿಸಲಾಗಿದೆ ಎಂದರು.
2012-13ನೇ ಸಾಲಿಗೆ ಜಿಲ್ಲಾ ಪಂಚಾಯತ್ ಗೆ ರಾಜ್ಯ ಅನುದಾನ ರೂ.3609.71 ಲಕ್ಷ ಮತ್ತು ಕೇಂದ್ರ ಅನುದಾನ ರೂ.3789.17 ಲಕ್ಷ, ಇದೇ ರೀತಿ ತಾಲ್ಲೂಕು ಪಂಚಾಯತ್ಗಳಿಗೆ ರಾಜ್ಯ ವಲಯ 2508.27 ಲಕ್ಷ ಹಾಗೂ ಕೇಂದ್ರ ಅನುದಾನ ರೂ.2223.44 ,ಗ್ರಾಮ ಪಂಚಾಯತ್ ಗಳಿಗೆ ರಾಜ್ಯ ಅನುದಾನ ರೂ.1378.39 ಲಕ್ಷ ಹಾಗೂ ಕೇಂದ್ರ ಅನುದಾನ 1407.50 ಲಕ್ಷ ಅನುದಾನ ಒಟ್ಟು ರೂ.7496.37 ಲಕ್ಷ ರಾಜ್ಯ ಅನುದಾನ ಹಾಗೂ ರೂ.7420.11 ಲಕ್ಷ ಕೇಂದ್ರ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಜೀರ್ ಸಭೆಗೆ ತಿಳಿಸಿದರು.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ರ ನಿಯಮ 310 ರಂತೆ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸುವುದು ಕಡ್ಡಾಯ ಹಾಗೂ ಎಲ್ಲಾ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಜಿಲ್ಲಾ ಯೋಜನಾ ಸಮಿತಿಗೆ ತಮ್ಮ ಕ್ರಿಯಾ ಯೋಜನೆಗಳನ್ನು ಸಲ್ಲಿಸಿ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲಾ ಯೋಜನಾ ಸಮಿತಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಮಂಗಳೂರು ಮಹಾನಗರಪಾಲಿಕೆ ಮೇಯರ್ ಅವರು ಉಪಾಧ್ಯಕ್ಷರಾಗಿರುತ್ತಾರೆ.ಲೋಕಸಭಾ ಸದಸ್ಯರು ಸದಸ್ಯರಾಗಿದ್ದು,ಇವರ ಜೊತೆ ಜಿಲ್ಲಾ ಪಂಚಾಯತ್ ನ 15 ಜನ ಸದಸ್ಯರು ಹಾಗೂ ಪುರಸಭೆ ಮತ ಕ್ಷೇತ್ರಗಳ 9 ಚುನಾಯಿತ ಸದಸ್ಯರು ಸದಸ್ಯರಾಗಿರುತ್ತಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಕಾರ್ಯದರ್ಶಿಯಾಗಿದ್ದು ಜಿಲ್ಲೆಯೆ 8 ವಿಧಾನ ಸಭಾ ಸದಸ್ಯರು 3 ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳು ಜಿಲ್ಲಾ ಯೋಜನಾ ಸಮಿತಿ ಖಾಯಂ ಆಹ್ವಾನಿತರಾಗಿರುತ್ತಾರೆ.
ಜಿಲ್ಲಾ ಯೋಜನಾ ಸಮಿತಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ಸೇರಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್ ತಿಳಿಸಿದರು.ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯತ್ ಸದಸ್ಯರಾದ ನವೀನ್ ಕುಮಾರ್ ಮೇನಾಲ ಅವರು ಮಾತನಾಡಿ ಜಿಲ್ಲಾ ವಾರ್ಷಿಕ ಯೋಜನೆ ತಯಾರಿಸುವಾಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು ಜಿಲ್ಲೆಯ ರಸ್ತೆಗಳನ್ನು ಡಾಂಬರೀಕರಣಕ್ಕೆ ಬದಲಾಗಿ ಕಾಂಕ್ರೀಟೀಕರಣಗೊಳಿಸಲು ಪ್ರಸ್ತಾವನೆ ಸಲ್ಲಿಸಬೇಕೆಂದು ತಮ್ಮ ಅಭಿಪ್ರಾಯ ಸೂಚಿಸಿದರು. ಇದಕ್ಕೆ ಇತರೆ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು.ಜಿಲ್ಲೆಯ 185 ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗುತ್ತಿದ್ದು ಎಲ್ಲಾ ಪ್ರೌಢಶಾಲೆಗಳಿಗೂ ಶೌಚಾಲಯಗಳನ್ನು ಡಿಸೆಂಬರ್ 31 ರೊಳಗೆ ಪೂರ್ಣಗೊಳಿಸುವಂತೆ ಡಾ.ವಿಜಯಪ್ರಕಾಶ್ ಸೂಚಿಸಿದರು.
ಅಲ್ಲದೆ ಜಿಲ್ಲೆಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಲು ರೂ.,13.5 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಕಿೃಯೆ ಆರಂಭಿಸಲಾಗಿದೆಯೆಂದರು.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಮಹಾಪೌರ ಪ್ರವೀಣ್ ,ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್ ಮುಂತಾದವರು ಹಾಜರಿದ್ದರು.