ಮಂಗಳೂರು,ನವೆಂಬರ್.25:ಪ್ರಥಮ ಬಾರಿಗೆ ಮಂಗಳೂರಿನಲ್ಲಿ 2012ನೇ ಜನವರಿ 12ರಿಂದ 16ರ ತನಕ ರಾಷ್ಟ್ರೀಯ ಯುವಜನೋತ್ಸವವನ್ನು ಆಯೋಜಿಸಲಾಗಿದ್ದು, ಈ ಉತ್ಸವದಲ್ಲಿ ದೇಶದ ನಾನಾ ರಾಜ್ಯಗಳ ಯುವಜನರು ಭಾಗವಹಿಸುತ್ತಿದ್ದು, ಇದೊಂದು ಬೃಹತ್ ಸಮಾವೇಶವಾಗಲಿದ್ದು, ಇದರ ಯಶಸ್ವಿಗೆ ಎಲ್ಲರೂ ತಂಡೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ ಅವರು ನಿನ್ನೆ
ತಮ್ಮ ಕಚೇರಿಯಲ್ಲಿ ನಡೆದ ಪೂರ್ವಭಾವೀ ಸಭೆಯಲ್ಲಿ ತಿಳಿಸಿದರು.ಸ್ಪರ್ಧಾತ್ಮಕ ಕಾರ್ಯ ಕ್ರಮಗಳು, ಆಹಾ ರೋತ್ಸವ, ವಿವಿಧ ಕಲಾವಿದರ ಶಿಬಿರ, ಸಾಹಸ ಚಟುವಟಿಕೆಗಳು,ಸರ್ಕಾರೇತರ ಚಟುವಟಿಕೆಗಳು, ಸಾಂಸ್ಕೃತಿಕ ಸಂಜೆ, ಮನರಂಜನಾತ್ಮಕ ಕ್ರೀಡೆಗಳು ಮುಂತಾದ ಸ್ಪರ್ಧಗಳು ವಿವಿದ ಜಾಗಗಳಲ್ಲಿ ನಡೆಯಲಿವೆ ಎಂದು ಯುವಜನಸೇವಾ ಮತ್ತು ಕೀಡಾ ಇಲಾಖೆ ಜಂಟಿ ನಿರ್ದೇಶಕರಾದ ವೈ.ಕಾಂತರಾಜೇಂದ್ರ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರಗಳ ಮತ್ತು ಕ್ರೀಡಾ ಮಂತ್ರಾಲಯದ ಉಪಕಾರ್ಯದರ್ಶಿ ತಂಗಮೆಲಿಯನ್, ಎನ್.ಎಸ್.ಎಸ್. ವಿಭಾಗದ ಸಹಾಯಕ ಕಾರ್ಯಕ್ರಮ ಸಲಹೆಗಾರ ಎ.ಕೆ.ಕೆವಿನಿಯ,ಭಾರತ ಸರ್ಕಾರದ ಯುವಜನ ವ್ಯವಹಾರಗಳ ಮತ್ತು ಕ್ರೀಡಾ ಮಂತ್ರಾಲಯದ ಅಧೀನ ಕಾರ್ಯದರ್ಶಿ ಎಚ್.ಎಂ.ಕುಂಡಲೀಯ, ಖಾದ್ರಿ ನರಸಿಂಹಯ್ಯ,ಆರ್.ಕೆ.ಕುಂಡು, ರಿಶಿಪಾಲ್ ಸಿಂಗ್, ಆರ್.ನಟರಾಜನ್ ಮುಂತಾದವರು ಭಾಗವಹಿಸಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು ನೆಹರೂ ಯುವ ಕೇಂದ್ರದ ಅಧಿಕಾರಿಗಳು, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.