Monday, November 28, 2011

ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ

ಮಂಗಳೂರು,ನವೆಂಬರ್.28: ರಾಜ್ಯ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ರಸ್ತೆ ಸಂಪರ್ಕ ಹಾಗೂ ಮೂಲಭೂತ ಸೌಕರ್ಯಗಳನ್ನೊದಗಿಸುವಲ್ಲಿ ಹಿಂದೆ ಬಿದ್ದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಹೇಳಿದರು.



ಅವ ರಿಂದು ಮಂಗಳೂರಿನ ಅಡ್ಯಾರ್ ನಲ್ಲಿ ವಿವಿಧ ಅಭಿ ವೃದ್ಧಿ ಕಾಮ ಗಾರಿ ಗಳಿಗೆ ಶಿಲಾ ನ್ಯಾಸ ನೆರ ವೇರಿಸಿ ಮಾತ ನಾಡು ತ್ತಿದ್ದರು. 80 ಲಕ್ಷ ರೂ. ವೆಚ್ಚದಲ್ಲಿ ಅಡ್ಯಾರ ಪದ ವರು- ಕೆಮಾಂ ಜೂರು ರಸ್ತೆ, 4.5ಲಕ್ಷ ರೂ. ವೆಚ್ಚದಲ್ಲಿ ಅಡ್ಯಾರ್ -ದಡ್ಡಳಿಕೆ -ಬನ್ನಂಜೆ ರಸ್ತೆ, 4ಲಕ್ಷ ರೂ. ವೆಚ್ಚದಲ್ಲಿ ಅಡ್ಯಾರ್- ಮಾಂಡೋವಿ ಮೋಟಾರ್ಸ್ ಎದುರು ರಸ್ತೆ, ಅಡ್ಯಾರ್ ಕೋರ್ದಬ್ಬು ರಸ್ತೆ 2ಲಕ್ಷ ರೂ. ವೆಚ್ಚದಲ್ಲಿ, ಅಡ್ಯಾರ್ - ನಾಗಬನ ರಸ್ತೆ 2ಲಕ್ಷ ರೂ. ವೆಚ್ಚದಲ್ಲಿ, ವಳಚ್ಚಿಲ್ ರಸ್ತೆ ತಡೆಗೋಡೆಗೆ 2ಲಕ್ಷ ರೂ ವೆಚ್ಚದಲ್ಲಿ ನಡೆಯಲಿದೆ ಎಂದು ಸಚಿವರು ಹೇಳಿದರು.
ಅಭಿವೃದ್ಧಿಗೆ ಸರ್ವರ ಸಹಕಾರವನ್ನು ಕೋರಿದ ಅವರು, ಜನೋಪಯೋಗಿ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಲೋಪವೆಸಗದೆ ಅತ್ಯುತ್ತಮವಾಗಿ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಸಂಪರ್ಕ ವ್ಯವಸ್ಥೆಯ ಅಗತ್ಯವನ್ನು ಪ್ರತಿಪಾದಿಸಿದ ಅವರು ಸರ್ಕಾರದ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೀರು ಮಾರ್ಗ ಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಅಡ್ಯಾರ್, ಪ್ರದೀಪ್ ಕುಮಾರ್ ಶೆಟ್ಟಿ, ಪ್ರಸನ್ನ ಅಡ್ಯಾರ್, ಅಡ್ಯಾರು ಗ್ರಾಮಪಂಚಾಯಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿ.ಪಂ ಸದಸ್ಯ ಮೆಲ್ವಿನ್ ಪಿಂಟೋ, ತಾ.ಪಂ ಸದಸ್ಯರಾದ ಶ್ರೀಮತಿ ಗೀತಾ ಕೇಶವ ಮುಂತಾದವರು ಉಪಸ್ಥಿತರಿದ್ದರು.