ಮಂಗಳೂರು,ನವೆಂಬರ್.11:ಕರಾವಳಿ ರಾಜ್ಯಗಳಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಚಂಡಮಾರುತ ಪ್ರವಾಹಗಳ ಅಪಾಯ ನಿರ್ವಹಣೆ ಯೋಜನೆಯ ನಿಮಿತ್ತ ಕಂದಾಯ ಇಲಾಖೆ ಹಾಗೂ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ,ಯುಎನ್ಡಿಪಿ ಇವರ ಸಹಕಾರದೊಂದಿಗೆ ದಕ್ಷಿಣಕನ್ನಡ ಜಿಲ್ಲಾಡಳಿತದ ವತಿಯಿಂದ ವಿಕೋಪ ನಿರ್ವಹಣಾ ಯೋಜನೆ ಕಾರ್ಯಾಗಾರವು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ವಿಭಾಗದ ಪ್ರಭಾತ್ ರವರು ಪ್ರವಾಹ ವಿಕೋಪ ನಿರ್ವಹಣೆಯ ಬಗ್ಗೆ ವಿವರವಾದ ಮಾಹಿತಿಯನ್ನಿತ್ತರು. ಪ್ರೊ ನಾಗರಾಜ್ ಚಂಡಮಾರುತ ಹಾವಳಿಯ ವಿವಿಧ ವಿಧಾನಗಳು ಹಾಗೂ ಎಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ದಯಾನಂದ ಕೆ.ಎ.,ಮಹಾನಗರಪಾಲಿಕಾ ಆಯುಕ್ತರಾದ ಡಾ.ಹರೀಶ್ ಕುಮಾರ್ ,ಸಹಾಯಕ ಆಯುಕ್ತ ಡಾ.ವೆಂಕಟೇಶ್,ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಮಹೇಂದ್ರ.ಆರ್. ಪ್ರೊಫೆಸರ್ ನಾಗರಾಜ್ ಹಾಗೂ ಪ್ರಭಾತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.