
ಇಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗ ನೀಡಿದ ಸೂಚನೆ ಯಂತೆ ಚುನಾವಣೆ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸವಿವರ ಚರ್ಚೆ ನಡೆಸಿದರು. ಪೊಲೀಸ್ ಮತ್ತು ಅಬಕಾರಿ, ವಾಣಿಜ್ಯ ತೆರಿಗೆ ಇಲಾಖೆಗಳು ಚುನಾವಣೆ ಸಂದರ್ಭದಲ್ಲಿ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಿಲ್ಲಾಧಿಕಾರಿಗಳು ಮಾರ್ಗದರ್ಶನ ನೀಡಿದರು. ಅಬಕಾರಿ ಇಲಾಖೆಯಿಂದ 24 ಗಂಟೆ ನಿಯಂತ್ರಣ ಕೊಠಡಿ, ಜಂಟಿ ತಂಡ ನಿಯೋಜನೆಗೆ ಸಹಕಾರ, ತಂಡಗಳಲ್ಲಿ ಅಬಕಾರಿ ಇಲಾಖೆಯಿಂದ ತಂಡಕ್ಕೊಬ್ಬರಂತೆ ಜನರು. ಜಿಲ್ಲೆಯ ಗಡಿಗಳೊಂದಿಗೆ ಅಬಕಾರಿ ಇಲಾಖಾಧಿಕಾರಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಸತತ ಸಂಪರ್ಕವಿರಿಸಿಕೊಂಡು ಅಪರಾಧಗಳು ಸಂಭವಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದರು. ಗೃಹರಕ್ಷಕ ದಳದ ಬೆಂಬಲ ತೆಗೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮದ್ಯ ಸಾಗಾಣಿಕೆ ತಡೆ, ಮದ್ಯದಂಗಡಿಗಳು ಸಮಯ ಉಲ್ಲಂಘನೆ ಮಾಡದಂತೆ ನೋಡಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಲು ಅಬಕಾರಿ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಎಲ್ಲ ಇಲಾಖೆಯಿಂದ ತಲಾ ಒಬ್ಬರು. ಕೆ.ಸಿ. ರೋಡ್ ನಲ್ಲೇ ಚೆಕ್ ಪೋಸ್ಟ್ ಸ್ಥಾಪನೆ ಬಗ್ಗೆ ಇಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಲಾಯಿತು. ತಲಪಾಡಿ ಚೆಕ್ ಪೋಸ್ಟ್ ಇದ್ದರೂ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿದ್ದು, ಇಲ್ಲಿ ಗಸ್ತು ತಿರುಗುವುದನ್ನು ಬಲಪಡಿಸುವಂತೆ ಸಲಹೆ ಮಾಡಿದರು.
ವಾಣಿಜ್ಯ ತೆರಿಗೆ ಇಲಾಖೆಯವರು ಸಗಟು ಖರೀದಿಯ ಮೇಲೆ ಕಣ್ಗಾವಲಿರಿಸಬೇಕು. ವ್ಯಾಪಾರಿಗಳ ಸಭೆ ಕರೆದು ಇಂತಹ ಪ್ರಕರಣಗಳೇನಾದರೂ ಬಂದ ಬಗ್ಗೆ ದಿನ ನಿತ್ಯ ವರದಿ ಮಾಡಲು ಸೂಚಿಸಬೇಕು. ಸಗಟು ಖರೀದಿಯಲ್ಲಿ ಅಕ್ರಮಗಳು ದಾಖಲಾದರೆ ವ್ಯಾಪಾರಿಗಳನ್ನೇ ಹೊಣೆಯಾಗಿಸಬೇಕೆಂದರು. ಪ್ರತಿನಿತ್ಯ ಎಲ್ಲ ಇಲಾಖೆಗಳು ಜಿಲ್ಲಾಧಿಕಾರಿಗಳ ಚುನಾವಣಾ ಶಾಖೆಗೆ ವರದಿಯನ್ನು ಕಳುಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಡಿಸಿಪಿ ಮುತ್ತುರಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಡಾ. ರವೀಂದ್ರನ್, ಆರ್ ಟಿ ಒ ಸೇವಾನಾಯಕ್, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ, ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಸಭೆಯಲ್ಲಿ ಪಾಲ್ಗೊಂಡಿದ್ದರು.