ಜೈವಿಕ ಇಂಧನ ಸಂಪ ನ್ಮೂಲ ಗಳು ನಮ್ಮಲ್ಲಿ ವಿಪುಲ ವಾಗಿದ್ದು ಬೇಡಿಕೆ ಯೂ ಹೆಚ್ಚಾ ಗಿದ್ದು,ಇದರ ಉತ್ಪಾದ ನೆಯಲ್ಲಿ ತೊಡಗು ವವರಿಗೆ ಉತ್ತಮ ಭವಿಷ್ಯ ಇದೆಎಂದು ಅಭಿ ಪ್ರಾಯ ಪಟ್ಟರು.ಕರ್ನಾ ಟಕ ಸರ್ಕಾರದ ಜೈವಿಕ ಇಂಧನ ಕಾರ್ಯ ಪಡೆ ಅಧ್ಯಕ್ಷರಾದ ವೈ.ಬಿ.ರಾಮಕೃಷ್ಣ ಅವರು ಮಾತ ನಾಡಿ ಇಂದಿನ ನಮ್ಮ ಜೀವನ ಶೈಲಿ ಆಹಾರ ಭದ್ರತೆ ಮುಖ್ಯ ವೋ/ ಇಂಧನ ಭದ್ರತೆ ಮುಖ್ಯ ವೋ ಎಂಬ ಜಿಜ್ಞಾಸೆ ಯಲ್ಲಿ ನಮ್ಮನ್ನು ದೂಡಿದೆ. ನಮ್ಮ ಜೈವಿಕ ಇಂಧನ ನೀತಿ ಕೃಷಿಗೆ ಪೂರಕ ವಾಗಿರ ಬೇಕೇ ಹೊರತು ಕೃಷಿಗೆ ಪರ್ಯಾಯ ವಾಗಿರ ಬಾರದು.ಇಂಧನಕ್ಕಾಗಿ ಆಹಾರ ಧಾನ್ಯಗಳನ್ನು ಬಳಸಿದರೆ ನಾವು ಆಹಾರದ ಕೊರತೆ ಎದುರಿಸಬೇಕಾದೀತು.ಆದ್ದರಿಂದ ನಾವು ಆಹಾರೋತ್ಪಾದನೆಗೆ ದಕ್ಕೆ ಆಗದಂತೆ ಜೈವಿಕ ಇಂಧನ ಮೂಗಳನ್ನು ಸಂಶೋಧನೆ ಮಾಡುವತ್ತ ಗಮನ ಕೇಂದ್ರಿ ಕರಿಸಬೇಕೆಂದರು. ಬರಡು ಬಂಗಾರ ಯೋಜನೆಯನ್ವಯ ರಾಜ್ಯದ 13.5 ಲಕ್ಷ ಹೆಕ್ಟೇರ್ ಪಾಳುಭೂಮಿಯಲ್ಲಿ ಜೈವಿಕ ಇಂಧನ ಮೂಲಗಳಿಗೆ ಅನುಕೂಲವಾದ ಗಿಡಮರಗಳನ್ನು ನೆಡಲು ಕಾರ್ಯ ಆರಂಭವಾಗಿದೆ.ಅದೇರೀತಿಹಸಿರು ಹೊನ್ನು ಯೋಜನೆಯನ್ವಯ ಸುರಹೊನ್ನೆ,ಹೊಂಗೆ,ದೂಪ ,ನಾಗ ಸಂಪಿಗೆ ಮುಂತಾದ ಜೈವಿಕ ಇಂಧನ ಮೂಲ ಸಸಿಗಳನ್ನು ಬೆಳೆಸಲಾಗುತ್ತಿದೆ.ಜೈವಿಕ ಇಂಧನ ತಂತ್ರಜ್ಞಾನ ದೇಶೀಯವಾದುದು. ಯಾವುದೇ ತಂತ್ರಜ್ಞಾನಸಾಮಾನ್ಯ ಜನರಿಗೆ ಕೈಗೆಟುಕುವಂತಿರಬೇಕು.ರಾಜ್ಯದಲ್ಲಿ ಈಗಾಗಲೇ 12ಕ್ಕೂ ಹೆಚ್ಚುಸಂಸ್ಥೆಗಳು ಜೈವಿಕ ಇಂಧನ ಸಂಶೋಧನೆ ಕೈಗೊಂಡಿದ್ದು,ಮುಂದಿನ ವರ್ಷ 25ಕ್ಕೂ ಹೆಚ್ಚು ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಲಿವೆ ಎಂದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯೋಗೀಶ್ ಭಟ್ ಈಸಂದರ್ಭದಲ್ಲಿ ಮಾತನಾಡಿದರು. ಬಸವರಾಜು,ಆಪ್ತ ಕಾರ್ಯದರ್ಶಿ ಅಧ್ಯಕ್ಷರು ಜೈವಿಕ ಇಂಧನ ಕಾರ್ಯಪಡೆ ಬೆಂಗಳೂರು ಇವರು ಉಪಸ್ಥಿತರಿದ್ದರು.ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ ಪ್ರಭಾಕರ ರಾವ್ ಸ್ವಾಗತಿಸಿದರು.