
ರಾಜ್ಯ ದಲ್ಲಿ ಈ ಬಾರಿ ಸುರಿದ ಭಾರೀ ಮಳೆ ಯಿಂದ ಗ್ರಾಮೀಣ ರಸ್ತೆಗಳು ತೀರಾ ಹದ ಗೆಟ್ಟಿವೆ. ಅವುಗಳ ರಿಪೇರಿ ಗಾಗಿ ರೂ.400 ಕೋಟಿಯನ್ನು ತಕ್ಷಣಕ್ಕೆ ಬಿಡು ಗಡೆ ಗೊಳಿಸ ಲಾಗು ತ್ತಿದೆ. ಸತತ ಮಳೆ ಸುರಿಯು ತ್ತಿರುವ ಹಿನ್ನೆಲೆ ಯಲ್ಲಿ ಕಾಮ ಗಾರಿ ಕೈಗೆತ್ತಿ ಕೊಳ್ಳಲು ಕೊಂಚ ವಿಳಂಬ ವಾಗಿದೆ ಎಂದು ಸಚಿ ವರು ನುಡಿದರು.ಶಿರಾಡಿ ಘಾಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಯೋಜನೆಗೆ ಕೇಂದ್ರ ಭೂ ಸಾರಿಗೆ ಇಲಾಖೆಯ ಅನು ಮೋದನೆ ನೀಡ ಬೇಕಾಗಿದೆ. ಮೂರು ಬಾರಿ ಕೇಂದ್ರ ಭೂ ಸಾರಿಗೆ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗಿದೆ. ಅಗತ್ಯ ವೆನಿ ಸಿದರೆ ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಉದಾಸಿ ನುಡಿದರು.ಹಾಸನ -ಬಿ.ಸಿ.ರೋಡ್ ಮಧ್ಯೆ ಚತುಷ್ಪಥ ಕಾಮಗಾರಿ ಕೈ ಗೆತ್ತಿಕೊಳ್ಳುವ ವೇಳೆ ಶಿರಾಡಿ ಘಾಟ್ ರಸ್ತೆಗೂ ಮತ್ತೆರಡು ಪಥಗಳನ್ನು ಸೇರಿಸಲಾಗುವುದು ಎಂದು ನುಡಿದ ಲೋಕೋಪಯೋಗಿ ಸಚಿವರು ರಾಜ್ಯದ ಘಾಟ್ ರಸ್ತೆಗಳನ್ನು ಸಿಮೆಂಟ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ರೂ. 100 ಕೋಟಿ ಅನುದಾನವನ್ನು ಕಾದಿರಿಸಲಾಗಿದೆ ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಂತ್ರಿಗಳು ಕರಾವಳಿ ಜಿಲ್ಲೆಗಳಿಗೆ ಅನ್ವಯಿಸುವಂತೆ ದರಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಆದರೆ ಕರಾವಳಿ ಭಾಗಗಳಲ್ಲಿ ಕೋರೆಗಳ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಅದನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.
