ಮಂಗಳೂರು,ಅ.29: ಜಿಲ್ಲೆಯ ಕೃಷಿಕರು ಕೃಷಿ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಕಿಸಾನ್ ಕಾಲ್ ಸೆಂಟರ್ 1551ಕ್ಕೆ ಕರೆ ಮಾಡಿ;ಇದು ಶುಲ್ಕ ರಹಿತ ಸಂಖ್ಯೆಯಾಗಿದ್ದು,ಕೃಷಿಕರು 1551ಕ್ಕೆ ಕರೆ ಮಾಡಿ ತಮ್ಮ ಹೆಸರು, ಊರು,ತಾಲೂಕು/ಜಿಲ್ಲೆ ಹಾಗೂ ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ನೀಡಬೇಕು.ಬಳಿಕ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿಸಬೇಕು.
ರೈತರ ಪ್ರಶ್ನೆಗಳಿಗೆ ತಕ್ಷಣ ಉತ್ತರ ದೊರಕದಿದ್ದಲ್ಲಿ ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಉತ್ತರ ಒದಗಿಸಲಾಗುವುದು. ಸರ್ಕಾರಿ ರಜೆದಿನಗಳನ್ನು ಹೊರತುಪಡಿಸಿ ಕಚೇರಿ ಕೆಲಸದ ದಿನಗಳಂದು ಬೆಳಗ್ಗೆ 9.30ರಿಂದ ಸಾಯಂಕಾಲ 6 ಗಂಟೆಯವರೆಗೆ ಮೇಲ್ಕಂಡ ಸಂಖ್ಯೆಗೆ ಡಯಲ್ ಮಾಡಿ ಖುದ್ದಾಗಿ ಉತ್ತರ ಪಡೆಯಬಹುದು. ಈ ಸೌಲಭ್ಯದ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.