

ಮಂಗಳೂರು ಜೂನ್ 24 : ಈಶಾನ್ಯ ರಾಜ್ಯಗಳ ಕರಕುಶಲ ಕಲೆಯನ್ನು ರಾಜ್ಯದ ಕರಾವಳಿ ಪ್ರದೇಶ ಮಂಗಳೂರಿಗೆ ಪರಿಚಯಿಸುವ ನಿಟ್ಟಿನಲ್ಲಿ ನಗರದಲ್ಲಿ ಕರಕುಶಲ ಮೇಳ ಇಂದಿನಿಂದ ಆರಂಭಗೊಂಡಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಈ ಮೇಳವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು. ಈಶಾನ್ಯ ರಾಜ್ಯಗಳ ಕರಕುಶಲ ಮತ್ತು ಕೈ ಮಗ್ಗ ಅಭಿವ್ರದ್ದಿ ನಿಗಮದ ಪ್ರಧಾನ ವ್ಯವಸ್ಥಾಪಕ ಡಿ.ಸಿ. ಬೋರ್ಕೊಟೊಕಿ ಮತ್ತಿರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೂನ್ 24 ರಿಂದ ಜುಲೈ 12 ವರೆಗೆ ನಗರದ ಹೊಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ಈ ಮೇಳ ನಡೆಯಲಿದೆ.