ಮಂಗಳೂರು, ಆಗಸ್ಟ್,09:- ಸುಶಿಕ್ಷಿತ ಜಿಲ್ಲೆ ದಕ್ಷಿಣ ಕನ್ನಡ; ಇಲ್ಲಿನ ಸುಶಿಕ್ಷಿತರಿಗೆ ಕಸವಿಭಜನೆ ಮೂಲಕ ಕಸ ವಿಲೇ ಹಾಗೂ ತ್ಯಾಜ್ಯದ ಬಳಕೆ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಅರಿವಿನ ಶಿಕ್ಷಣ ಶಾಲೆಯ ಮೂಲಕವೇ ಆರಂಭವಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಹೇಳಿದರು.
ಗುರು ವಾರ ಸಂಜೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡಿದ ಅವರು, ಹಿಂದಿನ ಸಭೆಯ ಅನು ಪಾಲನಾ ವರದಿ ಪರಿ ಶೀಲಿ ಸಿದರು. ಸ್ವಚ್ಛತೆಗಾಗಿ ಸಾಕಷ್ಟು ಬಹುಮಾನ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇ ಸವಾಲುಗುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಶಿಕ್ಷಣ ನೀಡುವ ಕಾರ್ಯವಾಗಬೇಕು. ಪ್ರಸಕ್ತ ದಿನಗಳಲ್ಲಿ ಪ್ರತಿಯೊಂದು ಬೆಲೆಬಾಳುವ ಸಾಧನಗಳಾಗಿದ್ದು, ಕಸಕ್ಕೂ ಬೆಲೆಯಿದೆ; ಕಸವನ್ನು ಬೇಕಾಬಿಟ್ಟಿ ನಮ್ಮ ಪರಿಸರಗಳಲ್ಲಿ ಬಿಸಾಡುವುದರಿಂದ ನಮಗೆ ಹಾಗೂ ನಮ್ಮ ಸಮಾಜಕ್ಕೆ ತೊಂದರೆಯಾಗಲಿದೆ ಎಂದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇಗೆ ಇನ್ನಷ್ಟು ಸಮಗ್ರ ಕೆಲಸವಾಗಬೇಕಿದೆ. ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಇಂಜಿನಿಯರ ಗಳು ಯೋಜನೆ ಅನುಷ್ಠಾನದಲ್ಲಿ ಆಸಕ್ತಿ ವಹಿಸಬೇಕು ಹಾಗೂ ನಿರಂತರತೆಯನ್ನು ಕಾಯ್ದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಹೇಳಿದರು.
ಶಾಲೆ, ಅಂಗನವಾಡಿ ಬಳಿಕ ಸ್ಥಳೀಯ ಜನಪ್ರತಿನಿಧಿಗಳಿಗೆ, ಗ್ರಾಮ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಕಾರ್ಯಕ್ರಮ ನೀಡುವ ಬಗ್ಗೆ, ಜಿಲ್ಲೆಯನ್ನು ಪರಿಪೂರ್ಣ ನಿರ್ಮಲ ನಗರವಾಗಿ ಪರಿವರ್ತಿಸಬೇಕೆಂದು ಹೇಳಿದರು.
ಜಿಲ್ಲೆಯ 6304 ಮಂದಿ ಫಲಾನುಭವಿಗಳು ಶೌಚಾಲಯ ನಿರ್ಮಿಸಲು ಬಾಕಿ ಇದ್ದು, ಸುಳ್ಯ, ಸುಬ್ರಹ್ಮಣ್ಯ ಪಂಚಾಯತ್ನಲ್ಲಿ, ಗುಂಡ್ಯದಲ್ಲಿ ಶೌಚಾಲಯ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು.