Friday, August 2, 2013

'ಲಕ್ಷ ವೃಕ್ಷ' ಅಭಿಯಾನ: ಸಸಿಗಳು ಇಲ್ಲಿ ಲಭ್ಯ


ಮಂಗಳೂರು, ಆಗಸ್ಟ್.02 :- ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಕರ್ನಾಟಕ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಭಾಗಿತ್ವದಲ್ಲಿ ರಾಜ್ಯ ಮಟ್ಟದ ಲಕ್ಷ ವೃಕ್ಷ ಅಭಿಯಾನಕ್ಕೆ ನಾಳೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ,  ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಚಾಲನೆ ನೀಡಲಿದ್ದಾರೆ.
ಈಗಾಗಲೇ ಜಿಲ್ಲಾಡಳಿತ, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳು ಹಾಗೂ ಸಂಘಸಂಸ್ಥೆಗಳು ಪರಿಸರಪ್ರೇಮಿಗಳ ನೆರವಿನಿಂದ ಸಾವಿರಾರು ಗಿಡಗಳನ್ನು ಮಂಗಳೂರು ನಗರ ಹಾಗೂ ಇತರೆಡೆಗಳಲ್ಲಿ ನೆಡಲಾಗಿದ್ದು, ಮಾಲಿನ್ಯ ರಹಿತ ಪರಿಸರ ಇಲಾಖೆಯ ಉದ್ದೇಶವಾಗಿದೆ.
ಪರಿಸರ ಹಸುರೀಕರಣಕ್ಕೆ ಪೂರಕವಾಗಿ ಮಂಗಳೂರು 0824 2425167, ಪುತ್ತೂರು 08251 230704, ಉಪ್ಪಿನಂಗಡಿ 08251 251121, ಬೆಳ್ತಂಗಡಿ 08256 232146, ಪಂಜದ 08257-278294, ಬಂಟ್ವಾಳದ 08255 232300, ಸುಳ್ಯ 08257 230716, ಸುಬ್ರಹ್ಮಣ್ಯ 08257 281259 ಇಲ್ಲಿ ಸಸಿಗಳು ಲಭ್ಯವಿದೆ.
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಎಲ್ಲ ಆಸಕ್ತ ರೈತರು, ಸಾರ್ವಜನಿಕರು ರಿಯಾಯಿಯಿತಿ ರೂ. 1,3 ಮತ್ತು 5 ರೂ. ದರದಲ್ಲಿ ಸಸಿ ವಿತರಿಸಿ ನೆಟ್ಟ ನಂತರ ಬದುಕುಳಿದ ಸಸಿ ಒಂದಕ್ಕೆ ಒಂದನೇ ವರ್ಷ ರೂ. 10, ಎರಡನೇ ವರ್ಷ 15ರೂ., ಮೂರನೇ ವರ್ಷ 20 ರೂ. ಗಳ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.