ಮಂಗಳೂರು,ಆಗಸ್ಟ್ 15: ಒಂದು ವಾರದೊಳಗೆ ಜಿಲ್ಲಾಧಿಕಾರಿಗಳು ಪಚ್ಚನಾಡಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ತ್ಯಾಜ್ಯ ವಿಲೇ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಆಗಿರುವ ಬಿ. ರಮಾನಾಥ ರೈ ಅವರು ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ಶಾಸಕರು, ಮಹನಗರಪಾಲಿಕೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರ ಸಲಹೆಗಳನ್ನು, ಸಮಸ್ಯೆಗಳನ್ನು ಆಲಿಸಿದ ಬಳಿಕ ಮೇಲಿನ ನಿರ್ಧಾರವನ್ನು ಪ್ರಕಟಿಸಿದರು.
ಮಹಾನಗರಪಾಲಿಕೆ ಆಯುಕ್ತರು ಪ್ರಸಕ್ತ ಅಲ್ಲಿ ತ್ಯಾಜ್ಯ ವಿಲೇಗೆ ಗುತ್ತಿಗೆ ಪಡೆದಿರುವ ಹಾಗೂ ಸಮಸ್ಯೆಗಳ ಇತ್ಯರ್ಥಕ್ಕೆ ಅಗತ್ಯವಿರುವ ಕುಂದುಗಳನ್ನು ನಿವಾರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು. ಮನೆ ಮನೆ ಕಸ ಸಂಗ್ರಹ ಹಾಗೂ ಕಸವಿಭಜನೆಯನ್ನು ಮನೆಯಿಂದಲೇ ಆರಂಭಿಸುವ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಸಚಿವರು ಹೇಳಿದರು. ಈ ಬಗ್ಗೆ ಮಹಾನಗರಪಾಲಿಕೆ ಆಯುಕ್ತರು ಮಾಧ್ಯಮದವರ ಸಹಕಾರ ಪಡೆಯಬೇಕೆಂದು ಸಚಿವರು ಹೇಳಿದರು. ಅರಣ್ಯ ಇಲಾಖೆಗೆ 4000 ಮರಗಳನ್ನು ಅದರಲ್ಲೂ ಆಮ್ಲಜನಕ ಹೆಚ್ಚಿಗೆ ಉತ್ಪಾದಿಸುವ ಉತ್ತಮ ಮರಗಳನ್ನು ಈ ಪ್ರದೇಶದಲ್ಲಿ ಬೆಳೆಸಲು ಸಚಿವರು ನಿರ್ದೇಶನ ನೀಡಿದ್ದು, ಮಹಾಗಣಿಯಂತಹ ಸಸಿಗಳನ್ನು ಈಗಾಗಲೇ ಅರಣ್ಯ ಇಲಾಖೆ ಬೆಳೆಸಲು ಅಲ್ಲಿ ಆರಂಭಿಸಿದೆ ಎಂದಸುತ್ತಮುತ್ತಲ ಪ್ರದೇಶಗಳ ಜನರಿಗೆ ತ್ಯಾಜ್ಯ ವಿಲೇ ಘಟಕದಿಂದ ಆರೋಗ್ಯಕ್ಕೆ ತೊಂದರೆಯಾದ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ವಿಭಾಗ ತುತರ್ಾಗಿ ಸ್ಪಂದಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಿ, ಸೂಕ್ತವಾಗಿ ಸ್ಪಂದಿಸಿ ಎಂದು ಸಚಿವರು ಸೂಚಿಸಿದರು.
ಸುತ್ತಮುತ್ತಲ ಪ್ರದೇಶಗಳು ಕಲುಷಿತಗೊಳ್ಳದಂತೆ ತಡೆಯಲು ಹಾಗೂ ವಾಸನೆಯನ್ನು ತಡೆಯಲು ಬಯೋ ಎನ್ಜೈಮ್ಸ್ ಬಳಕೆ ಅನಿವಾರ್ಯ. ಇನ್ನು ಮುಂದೆಯೂ ಕಸದ ಮೇಲೆ ಮಣ್ಣು ಹಾಕಿ ಮುಚ್ಚುವ ಪ್ರಕ್ರಿಯೆಯನ್ನೇ ಮುಂದುವರಿಸಿದರೆ ಕಸ ಹಾಕಲು ಸ್ಥಳದ ಕೊರತೆ ಉದ್ಭವವಾಗಲಿದೆ. ಪ್ರತಿದಿನಕ್ಕೆ ಇಲ್ಲಿಗೆ 250ರಿಂದ 300 ಟನ್ ಕಸ ಬರುತ್ತಿದ್ದು, ಪ್ರತಿ ಪುರಸಭೆಗಳಲ್ಲಿ ಅಲ್ಲಿನ ಕಸ ಅಲ್ಲೇ ವಿಲೇ ಆಗುವಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪರಿಸರ ಅಧಿಕಾರಿಗಳು ತಮ್ಮ ಅಧಿಕಾರವನ್ನು ಉಪಯೋಗಿಸಿ ಸಮಸ್ಯೆಗಳ ಪರಿಹಾರಕ್ಕೆ ಪೂರಕ ನೆರವು ನೀಡಬೇಕೆಂದು ಉಸ್ತುವಾರಿ ಸಚಿವರು ಹೇಳಿದರು. ತ್ಯಾಜ್ಯ ವಿಲೇ ಆಗಲೇಬೇಕು. ಹಾಗಾಗಿ ವೈಜ್ಞಾನಿಕ ತ್ಯಾಜ್ಯ ವಿಲೇಗೆ ಪಚ್ಚನಾಡಿ ಮಾದರಿ ಆಗಲಿ. ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಎಲ್ಲ ನಿರ್ಧಾರ ಕೈಗೊಳ್ಳಲು ಎಲ್ಲ ಅಧಿಕಾರವನ್ನು ನೀಡಲಾಗಿದೆ ಎಂದು ಉಸ್ತುವಾರಿ ಸಚಿವರು ಸ್ಪಷ್ಟಪಡಿಸಿದರು. ಸಭೆಯಲ್ಲಿ ಶಾಸಕರಾದ ಜೆ ಆರ್ ಲೋಬೋ, ಮೊಹಿಯುದ್ದಿನ್ ಬಾವಾ, ಅಪರ ಜಿಲ್ಲಾಧಿಕಾರಿ ದಯಾನಂದ ಕೆ. ಎ., ಪಾಲಿಕೆ ಆಯುಕ್ತರಾದ ಶಾನಾಡಿ ಅಜಿತ್ ಹೆಗ್ಡೆ, ಡಿಸಿಎಫ್ ಪಾಲಯ್ಯ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಾಂತಪ್ಪ ಮತ್ತು ವಲಯ ಆಯುಕ್ತರಾದ ಶ್ರೀಮತಿ ಪ್ರಮೀಳಾ, ಪರಿಸರ ಅಧಿಕಾರಿಗಳು, ಡಾ. ಸುದರ್ಶನ್, ಪರಿಸರ ಅಧಿಕಾರಿ, ಕಾರ್ಪೋರೇಟರ್ ಗಳು ಪಾಲ್ಗೊಂಡಿದ್ದರು.