ಮಂಗಳೂರು,
ಅಗೋಸ್ತು.02:- ದಕ್ಷಿಣಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಉಪ
ಚುನಾವಣೆ 2013 ರ ಮತದಾನ ನಡೆಯುವ ಪ್ರಯುಕ್ತ ದಿನಾಂಕ 3-8-13 ರ ಪೂರ್ವಾಹ್ನ 7
ಗಂಟೆಯಿಂದ 4-8-13 ರ ರಾತ್ರಿ 12 ಗಂಟೆ ವರೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗ್ರಾಮ
ಪಂಚಾಯತ್ ಉಪ ಚುನಾವಣೆ ನಡೆಯುವ ಪ್ರದೇಶಗಳಾದ
ಅರಿ ಯಡ್ಕ, ದೋ ಲ್ಪಾಡಿ, ಸವ ಣೂರು, ಕಬಕ, ಕನ್ಯಾನ,ಉಜಿರೆ,
ನಾವೂರು,ಸೋಣಂ ದೂರು,ಐವರ್ನಾಡು, ವಿಟ್ಲ, ಪಾಲಡ್ಕ, ಪಡು ಕೋಣಾಜೆ, ಮೆನ್ನಬೆಟ್ಟು, ,
ಚೇಳಾಯೂರು, ಬಜಪೆ,ಬೊಂಡಂತಿಲ,ಬೊಳಿಯೂರು, ಕೋಣಾಜೆ,ಬೆಳ್ಮ,ಸೋಮೇಶ್ವರ ಮತ್ತು 7-8-13
ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯ ತನಕ ಮತ ಎಣಿಕೆ ನಡೆಯುವ ಪ್ರದೇಶವಾದ
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ 3 ಕಿಲೋ ಮೀಟರ್ ವ್ಯಾಪ್ತಿ ಪ್ರದೇಶಗಳನ್ನು ಮದ್ಯ
ಮುಕ್ತ ದಿನಗಳೆಂದು (ಡ್ರೈಡೇಸ್) ಘೋಷಿಸಿ ಈ ದಿನಗಳಲ್ಲಿ ಎಲ್ಲಾ ಮದ್ಯದಂಗಡಿಗಳನ್ನು
ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟ ಪರವಾನಿಗೆ ಇರುವಂತಹ ಅಂಗಡಿಗಳನ್ನು ಮತ್ತು
ಮಾರಾಟ ಕೇಂದ್ರಗಳನ್ನು ಮುಚ್ಚಲು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಾದ ಎನ್.ಪ್ರಕಾಶ್
ಆದೇಶಿಸಿರುತ್ತಾರೆ.