
ಅವರಿಂದು ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪುವಿನಲ್ಲಿ ಕುರ್ನಾಡು ಗ್ರಾಮ ಪಂಚಾ ಯಿತಿ,ದ.ಕ.ಜಿ.ಪಂ, ಬಂಟ್ವಾಳ ತಾಲೂಕು ಪಂಚಾಯಿತಿ, ವರ್ತಕರ ಸಂಘ ಮುಡಿಪು, ಜನ ಶಿಕ್ಷಣ ಟ್ರಸ್ಟ್ ನ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸ ಲಾದ ಘನತ್ಯಾಜ್ಯ ವಿಲೇವಾರಿ ನಿರ್ವಹಣ ಘಟಕ ಉದ್ಘಾಟಿಸಿ ಮಾತನಾ ಡುತ್ತಿದ್ದರು.ಈಗಾಗಲೇ ಎಲ್ಲಾ ದೇವಾಲ ಯಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸ ಲಾಗಿದ್ದು, ಇದನ್ನು ಎಲ್ಲ ಧಾರ್ಮಿಕ ಕೇಂದ್ರ, ಉದ್ಯಾನ ಹಾಗೂ ಮೃಗಾಲ ಯಗಳಿಗೂ ವಿಸ್ತರಿಸ ಲಾಗುವುದು. ಪ್ಲಾಸ್ಟಿಕ್ ನಿಂದಾಗುವ ಅನಾಹುತ, ಸರಿಯಾದ ತ್ಯಾಜ್ಯ ವಿಲೇವಾರಿ ಯಿಲ್ಲದೆ ಅಂತರ್ ಜಲ ಹಾಳಾ ಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ ಸಚಿವರು, ಉತ್ತಮ, ಸದೃಢ ಭಾರತ ನಿರ್ಮಾಣಕ್ಕೆ ಪರಿಸರ ಕಾಪಿಡುವ ಅಗತ್ಯವನ್ನು ಪ್ರತಿ ಪಾದಿಸಿದರು.ರಾಜ್ಯದ 9 ಲಕ್ಷ ಮಕ್ಕಳು ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋ ಜನವನ್ನು ಪಡೆದಿದ್ದು, ಅ.19 ರಂದು ನಮ್ಮ ಜಿಲ್ಲೆಯಲ್ಲೂ ಮಕ್ಕಳ ಹೆತ್ತವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದರು.

ಇಂದು ಮುಡಿಪು ವಿನಲ್ಲಿ ಗಾಂಧೀ ಜಯಂತಿ ಯಂದು ಸ್ವಾಸ್ಥ್ಯ ಸಮಾಜಕ್ಕೆ ಪೂರಕ ಕೆಲಸಕ್ಕೆ ಮುನ್ನುಡಿ ಬರೆದಿದ್ದು, ಇಂತಹ ಕೆಲಸಗಳು ನಿರಂತ ರವಾಗಿ ನಡೆಯಲಿ; ಇದಕ್ಕೆ ಸರ್ಕಾರದ ವತಿಯಿಂದ ಸರ್ವ ಸಹಾಯ ನೀಡುವ ಘೋಷಣೆ ಯನ್ನು ಸಚಿವರು ಮಾಡಿದರು. ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಶಂಕು ಸ್ಥಾಪನೆ ಹಾಗೂ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಶಾಸಕ ಯು ಟಿ ಖಾದರ್ ಅವರು, ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರ ಸಹಕಾರ ವನ್ನು ಪ್ರಶಂಸಿ ಸಿದರು.ಗ್ರಾಮೀಣರಲ್ಲಿ ಸ್ವಚ್ಛತೆ ಪರಿಕಲ್ಪನೆ ನಿರಂತರ ವಾಗಿರಲಿ ಎಂದರು. ಭಾಗ್ಯಲಕ್ಸ್ಮಿ ಯೋಜನೆಯಡಿ ಮಕ್ಕಳ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಜಿ ಪಂ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು ಉದ್ಘಾಟಿಸಿ ಮಾತನಾಡಿದರು.
