ಅವರು 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ವಾರ್ತಾ ಇಲಾಖೆ, ಗ್ರಾಮ ಪಂಚಾಯತ್ ಬೆಳ್ಳಾರೆ ಮತ್ತು ರೋಟರಿ ಟೌನ್ ಬೆಳ್ಳಾರೆ ಸಹ ಯೋಗದಲ್ಲಿ ಏರ್ಪಡಿಸಿದ್ದ ಸ್ತ್ರೀ ಶಕ್ತಿ ಮತ್ತು ಮಹಿಳಾ ಸಬಲೀಕರಣ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ಗಳಾಗಿದ್ದ ತಾಲೂಕು ಪಂಚಾ ಯತ್ ಸದಸ್ಯ ರಾದ ಅನಸೂಯ ಅವರು ಸ್ತ್ರೀಶಕ್ತಿ ಸಂಘಟನೆ ಗಳಿಂದ ಮಹಿಳೆ ಯರು ಅಭಿವೃದ್ಧಿ ಹೊಂದುತ್ತಿದ್ದು, ಮಹಿಳೆ ಕಲಿತು ಸಾಕ್ಷರ ಳಾದರೆ ಆಗುವ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಮೇಲ್ವಿಚಾ ರಕರಾದ ಪ್ರವೀಣ್ ಕುಮಾರ್ ಅವರು ಸ್ವ ಸಹಾಯ ಸಂಘಗಳು ಬೆಳೆದ ಬಗ್ಗೆ ಇದರಿಂದ ಸಾಮಾಜಿಕ ಅಭಿವೃದ್ಧಿ ಯಾಗುತ್ತಿರುವ ಬಗ್ಗೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಸಂಕಿರಣ ವನ್ನುದ್ದೇಶಿಸಿ ಮಾತನಾಡಿದ ವನಿತಾ ಅವರು, ಸ್ವ ಸಹಾಯ ಸಂಘದ ಉಗಮ, ಮಹಿಳೆಯರ ಪಾಲ್ಗೊ ಳ್ಳುವಿಕೆ ಹಾಗೂ ಇದರಿಂದಾದ ಅನುಕೂಲಗಳನ್ನು ವಿವರಿಸಿದರು.ಸಂಕಿರಣದ ಅಧ್ಯಕ್ತತೆ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಧವ ಗೌಡರು, ಮಾಹಿತಿ ಕಾರ್ಯ ಕ್ರಮ ಗಳಿಂದ ಜನರಿಗೆ ಉಪಕಾರ ವಾಗಲಿ.