Thursday, August 5, 2010

'ಪ್ಲಾಸ್ಟಿಕ್ ತೋರಣ ತಂದೀತು ಮರಣ'

ಮಂಗಳೂರು,ಆಗಸ್ಟ್ 05: ದಕ್ಷಿಣ ಕನ್ನಡ ಜಿಲ್ಲೆ ಸ್ವಚ್ಛತೆಯಲ್ಲಿ ಹಲವು ಮಾದರಿಗಳನ್ನು ರಾಷ್ಟ್ರಕ್ಕೆ ನೀಡಿದ್ದು, ಇರಾ ಮಾದರಿಯನ್ನು ವೀಕ್ಷಿಸಲು ಹಲವೆಡೆಗಳಿಂದ ತಂಡಗಳು ಆಗಮಿಸಿದ್ದವು. 203 ಸ್ವಚ್ಛತೆ ಪ್ರಶಸ್ತಿ ಪಡೆದ ಗ್ರಾಮಪಂಚಾಯತ್ ಗಳು ಘನತ್ಯಾಜ್ಯ ವಿಲೇವಾರಿಯಲ್ಲೂ ಎಲ್ಲರಿಗೂ ಮಾದರಿಯಾಗಬೇಕೆಂಬ ಉದ್ದೇಶವನ್ನಿರಿಸಿಕೊಂಡು ಜನಾಂದೋಲನ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಹೇಳಿದರು.

ಅವರಿಂದು ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣ ಹಾಗೂ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಸಂಸ್ಕರಣ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾ ಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕುರ್ನಾಡು ಗ್ರಾಮ ಪಂಚಾಯತ್, ಜನಶಿಕ್ಷಣ ಟ್ರಸ್ಟ್ (ರಿ)ಮುಡಿಪು, ಕಟ್ಟಡ ಮಾಲಕರ ಹಾಗೂ ವರ್ತಕರ ಸಂಘ, ಲಯನ್ಸ್ ಮತ್ತು ಲಯನ್ನೆಸ್ ಕ್ಲಬ್ ಮಂಗಳ ಗಂಗೋತ್ರಿ, ಸರಕಾರಿ ಪದವಿಪೂರ್ವ ಕಾಲೇಜು ಮುಡಿಪು, ಬ್ರೈಟ್ ವಿದ್ಯಾ ಸಂಸ್ಥೆ ಮುಡಿಪು, ಶ್ರೀ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಯೋಜನೆ ಮುಡಿಪು ವಲಯದ ಸಹಯೋಗ ದೊಂದಿಗೆ ಸ್ವಾಭಿ ಮಾನಕ್ಕಾಗಿ ಸ್ವಚ್ಛತೆ, ಸ್ವಚ್ಛತೆಯೇ ಸಮೃದ್ಧಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಸ್ವಚ್ಛಪರಿಸರ ನಿರ್ಮಿಸಿ ಎಂಬ ಘೋಷ ವಾಕ್ಯಗಳೊಂದಿಗೆ ಬೆಳಿಗ್ಗೆ. 9.30ಕ್ಕೆ ಇರಾ ಕ್ರಾಸ್ ನಿಂದ ಕಾಯರ್ ಗೋಳಿವರೆಗೆ ತ್ಯಾಜ್ಯ ಪ್ಲಾಸ್ಟಿಕ್ ಗಳನ್ನು ಹೆಕ್ಕುವ ಶ್ರಮದಾನ ಕಾರ್ಯಕ್ರಮ ನಡೆಯಿತು.ಘನತ್ಯಾಜ್ಯ ವಿಲೇವಾರಿ ಮತ್ತು ನೀರು ನಿರ್ವಹಣೆಯಲ್ಲಿ ಇತರ ರಿಗಿಂತ ದಕ್ಷಿಣ ಕನ್ನಡ ಬಹಳ ಮುಂದಿದೆ ಎಂದ ಸಿಇಒ ಅವರು, ತಳ ಮಟ್ಟದಿಂದ ರೂಪುಗೊಂಡ ಯೋಜನೆಗಳು ಜನಪರ ಹಾಗೂ ಜನಪ್ರಿಯ ವಾಗುತ್ತವೆ. ಯಾವುದೇ ಯೋಜನೆಗಳ ಯಶಸ್ಸಿಗೆ ಜನರ ಸಹಕಾರ ಮುಖ್ಯ ಹಾಗಾಗಿ ಜನರೊಂದಿಗೆ ಈ ಯೋಜನೆಯ ಅನುಷ್ಠಾನಕ್ಕೆ ಆಡಳಿತ ಮುಂದಾಗಿದ್ದು ಯೋಜನೆಯ ಯಶಸ್ಸು ಸರ್ವರಿಗೂ ಸಲ್ಲಲಿದೆ ಎಂದರು. ಸ್ವಚ್ಛತೆ ಎಂಬುದು ನಿರಂತರ ಪ್ರಕ್ರಿಯೆ ಯಾಗಿದ್ದು, ನಾಗರೀಕರ ಸಹಕಾರ, ಸ್ವಚ್ಛತಾ ಪ್ರಜ್ಞೆ ಈ ನಿಟ್ಟಿನಲ್ಲಿ ಮುಖ್ಯವಾಗುತ್ತದೆ. ಪಂಚಾಯಿತಿ ಗಳನ್ನು, ಶಾಲೆಗಳನ್ನು, ಅಂಗನ ವಾಡಿಗಳಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ನಗದು ಪ್ರಶಸ್ತಿಗಳನ್ನು ಘೋಷಿಸಿದೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಎ.ಸಿ.ಭಂಡಾರಿ ಸ್ವಾಗತಿ ಸಿದರು. ತಾಲೂಕು ಪಂಚಾಯತ್ ಸದಸ್ಯ ಚಂದ್ರಹಾಸ ಕರ್ಕೇರಾ, ನರಿಂಗಾನ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಇಸ್ಮಾಯಿಲ್, ಕುರ್ನಾಡು ಪಂಚಾಯತ್ ಅಧ್ಯಕ್ಷ ಸೂಫಿ , ಪಜೀರಿನ ಅಧ್ಯಕ ಇಮ್ತಿಯಾಜ್, ಇರಾದ ಅಧ್ಯಕ ರಝಾಕ್, ಬಾಳೆಪುಣಿಯ ಅಧ್ಯಕ ಉಮ್ಮರ್ ಪಜೀರ್, ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ, ಜಿಲ್ಲಾ ಸಂಯೋಜಕರಾದ ಮಂಜುಳಾ, ವರ್ತಕರ ಸಂಘದ ರಮೇಶ ಶೇಣವ, ಬ್ರೈಟ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಜಲೀಲ್, ಜನಶಿಕ್ಷಣ ಟ್ರಸ್ಟನ ಶೀನಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಅವರು, ಗ್ರಾಮಸ್ಥರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಯನ್ಸ್ ನ ದೇವದಾಸ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ:
ತ್ಯಾಜ್ಯ ಸಂಗ್ರಹದ ಬಳಿಕ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಸೂಫಿ ಅವರು ಮಾತನಾಡಿ, ತ್ಯಾಜ್ಯ ವಿಲೇವಾರಿಯ ಅಗತ್ಯ ಹಾಗೂ ಅದರಲ್ಲಿ ಜನರ ತೊಡಗಿಕೊಳ್ಳುವಿಕೆ ಅಗತ್ಯವನ್ನು ಹೇಳಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ ಕಾಮತ್ ಮಾತನಾಡಿದರು. ಜಿಲ್ಲಾ ಪಂಚಾಯತ್ನಿಂದ ಸಂಪೂರ್ಣ ಸಹಕಾರ ಹಾಗೂ ನೀಡುವ ನೆರವಿನ ಮಾಹಿತಿಯನ್ನು ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ ವಿವರಿಸಿದರು.