
ಇಂದು ಮಂಗಳೂರನಲ್ಲಿ ಜಿಲ್ಲಾಧಿ ಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಧಿಕಾರಿ ಗಳೊಂದಿಗೆ ನಡೆದ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ದೇಶಿಸಿ ಮಾತ ನಾಡುತ್ತಿದ್ದ ಅವರು, ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಅಧಿಕಾರಿಗಳು ಪಾಲಿಸಿ ಜಿಲ್ಲೆಯ ಅಭಿವೃದ್ಧಿಗೆ ನೆರವಾಗ ಬೇಕೆಂದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು, ಮರಳು ಸಾಗಾಣಿಕೆ ತಡೆಗೆ ಟಾಸ್ಕ್ ಫೋರ್ಸ್(ಕಾರ್ಯ ಪಡೆ) ರಚಿಸ ಲಾಗಿದ್ದು, ಗಡಿಯಲ್ಲಿ ಚೆಕ್ ಪೋಸ್ಟ್ ಗಳಿವೆ; ಆದರೆ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಬಂದೋಬಸ್ತು ಮಾಡುವ ಅಗತ್ಯವಿದೆ. ಇದಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಸಾರಿಗೆ ಇಲಾಖೆ, ಪೊಲೀಸ್ ಮತ್ತು ಅರಣ್ಯ ಇಲಾಖೆ, ಕಮರ್ಶಿಯಲ್ ಟ್ಯಾಕ್ಸ್( ವಾಣಿಜ್ಯ ತೆರಿಗೆ) ಉದ್ಯೋಗಿಗಳನ್ನು ಒಳಗೊಂಡ 24 ಗಂಟೆ ಕರ್ತವ್ಯ ನಿರ್ವಹಿಸುವ ಟಾಸ್ಕಫೋರ್ಸನ್ನು ಚೆಕ್ ಪೋಸ್ಟ್ ನಲ್ಲಿ ನಿಯೋಜಿಸಲು ಉದ್ದೇಶಿಸ ಲಾಗಿದೆ ಎಂದರು. ಈ ಕ್ರಮದ ಬಳಿಕವೂ ಜನರಿಂದ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ದೂರು ಬಂದರೆ ಕೇರಳ ಸರಕಾರದಿಂದ ಮಾಹಿತಿ ಹಕ್ಕಿನಡಿ(RTI) ಮರಳು ಲಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಕಠಿಣ ಕ್ರಮ ಜರುಗಿ ಸುವುದಾಗಿ ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು. ಅಧಿಕಾರಿಗಳು ಸರಕಾರದ ಆದೇಶ ಪಾಲಿಸಲು ಆಸಕ್ತಿಯಿಂದ ಕರ್ತವ್ಯದಲ್ಲಿ ತೊಡಗಿ ಕೊಳ್ಳಬೇಕೆಂದರು. ಸಾರಿಗೆ ಇಲಾಖೆಯವರು ವಾಹನಗಳ ದುರ್ಬಳಕೆಯ ಬಗ್ಗೆ ಮಾಹಿತಿ ಕಲೆ ಹಾಕುವ ಅಗತ್ಯವಿದೆ ಎಂದೂ ಜಿಲ್ಲಾಧಿಕಾರಿಗಳು ಹೇಳಿದರು,
ಈ ಸಂಬಂಧ ಮೇಲ್ಕಂಡ ಇಲಾಖೆಗಳ ಮುಖ್ಯಸ್ಥರೊಂದಿಗೆ ಬೆಂಗಳೂರಿನಲ್ಲೂ ಚರ್ಚೆ ನಡೆಸಲಾಗಿದೆ. ಜಿಪಿಎಸ್(Global Positioning System) ನ್ನು ರಾಜ್ಯ ಮಟ್ಟದಲ್ಲೂ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಉಸ್ತುವಾರಿ ಕಾರ್ಯದರ್ಶಿಗಳು ಹೇಳಿದರು. ಸುಮಾರು ಒಂದೂವರೆ ಗಂಟೆ ಕಾಲ ನಗರದ ಹಾಗೂ ಜಿಲ್ಲೆಯ ರಸ್ತೆಗಳ ಬಗ್ಗೆ ಸವಿವರ ಚರ್ಚೆ ನಡೆದು, ರಾಷ್ಟ್ರೀಯ ಹೆದ್ದಾರಿ(NH) ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHI) ಮಾಡುವ ಪಾಪದ ಕೆಲಸದಿಂದ ದಿನನಿತ್ಯ ಜನರ ದೂರು ಸ್ವೀಕರಿಸುವುದೇ ದೊಡ್ಡ ಕೆಲಸವಾಗಿದೆ ಎಂದು ಜಿಲ್ಲಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳ ಗಮನ ಸೆಳೆದರು. ನಗರದ ನಂತೂರು-ಕುಲಶೇಖರ ವ್ಯಾಪ್ತಿಯಲ್ಲಿ ರಸ್ತೆಯೇ ಇಲ್ಲ; ಬಿ.ಸಿ. ರೋಡು ಮಂಗಳೂರು ಪ್ರಯಾಣ, ಪಂಪವೆಲ್ ನಿಂದ ತಲಪಾಡಿವರೆಗಿನ ಪ್ರಯಾಣ ಅತ್ಯಂತ ಕಷ್ಟಕರವಾಗಿದೆ ಎಂದ ಜಿಲ್ಲಾಧಿಕಾರಿಗಳು ಈ ರಸ್ತೆಗಳ ತಕ್ಷಣದ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಳೆದ ಸಭೆಯ ಬಳಿಕದ ಪ್ರಗತಿ ವರದಿಯನ್ನು ಸಭೆಗೆ ನೀಡಿದರು. ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸುವ ಭರವಸೆಯನ್ನು ನೀಡಿದರು. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 596.25 ಕಿ.ಮೀ ರಾಜ್ಯ ರಸ್ತೆ ಇದೆ ಎಂದ ಅವರು, ಬಜಪೆ-ಮರವೂರು, ಕಂದಾವರ, ಪರಾರಿ-ಉಳಾಯಿಬೆಟ್ಟು, ನೀರುಮಾರ್ಗ-ಅಡ್ಯಾರು ರಸ್ತೆಗಳನ್ನು ತುರ್ತು ದುರಸ್ತಿ ಪಡಿಸಬೇಕಾದ ಅಗತ್ಯವಿದೆ ಎಂದರು. ಎಂ ಆರ್ ಪಿ ಎಲ್ ಮತ್ತು ಎನ್ ಎಂ ಪಿ ಟಿ ಗೆ ಹೋಗುವ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದಾಗುವ ಸಮಸ್ಯೆ ಬಗ್ಗೆ ಡಿಸಿಪಿ (ಅಪರಾಧ ಮತ್ತು ಸಂಚಾರ) ಮುತ್ತೂರಾಯ ಅವರು ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿರುವ ರಸ್ತೆಯ ಬಗ್ಗೆಯೂ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.


ಮೀನುಗಾರಿಕೆ, ಶಿಕ್ಷಣ, ಕೈಗಾರಿಕೆ ಇಲಾಖೆಗಳ ಪ್ರಗತಿಯನ್ನು ಉಸ್ತುವಾರಿ ಕಾರ್ಯದರ್ಶಿಗಳು ಪರಿಶೀಲಿಸಿದರು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ವಂದಿಸಿದರು. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.