ಜಿಲ್ಲೆಯ ಬಹು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ

ಇತ್ತೀಚೆಗೆ ರಾಜ್ಯಮಟ್ಟದ ಕುಡಿಯುವ ನೀರಿನ ಯೋಜನಾ ಸಮಿತಿ ಸಭೆಯಲ್ಲಿ ರಾಜ್ಯ ಸರಕಾರ ಮಂಗಳೂರು ತಾಲೂಕಿನ 3 ಯೋಜನೆಗಳಿಗೆ 86.00ಕೋಟಿ ರೂ.ಬಿಡುಗಡೆ ಮಾಡಿತ್ತು. ಬಂಟ್ವಾಳ ತಾಲೂಕಿನ 8 ಯೋಜನೆಗೆ 173.85 ಕೋಟಿ, ಸುಳ್ಯ ತಾಲೂಕಿನ 6 ಯೋಜನೆಗೆ 19.00ಕೋಟಿ, ಪುತ್ತೂರು ತಾಲೂಕಿಗೆ 23.00ಕೋಟಿ ಹಾಗೂ ಬೆಳ್ತಂಗಡಿ ತಾಲೂಕಿನ 2 ಯೋಜನೆ 24.00ಕೋಟಿ ರೂಪಾಯಿಯ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಮೂಲಕ ದ.ಕ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಸಂಕಲ್ಪ ರಾಜ್ಯ ಸರಕಾರ ಮಾಡಿದೆ ಎಂದು ಜಿ.ಪಂ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ ಹೇಳಿದರು.
ಇನ್ನುಳಿದ ತಾಲೂಕಿನ ಯೋಜನೆಗೆ ಅನುಮೋದನೆ ನೀಡುವಂತೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ತಿಳಿಸಿದರು.