ಮಂಗಳೂರು,ಸೆಪ್ಟೆಂಬರ್,05: ಮಾನವನ ದುರಾಸೆಯ ಫಲ ಸಾವಿರಾರು ವರ್ಷಗಳಿಂದ ಪ್ರಾಣಿ
ಸಂಕುಲವನ್ನು ಪೋಷಿಸುತ್ತಿರುವ ಪರಿಸರವನ್ನು ನಾವು ಮುಂದಿನ ಪೀಳಿಗೆಗಾಗಿ ಕಾದಿರಿಸಲು
ಸಂರಕ್ಷಿಸಬೇಕಿದೆ ಎಂದು ದಕ್ಷಿಣಕನ್ನಡ ಜಿಲ್ಲೆ ಅಪರ ಜಿಲ್ಲಾಧಿಕಾರಿ ದಯಾನಂದ ಅವರು
ಜನತೆಗೆ ಕರೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಂಗಳೂರಿನ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವತಿಯಿಂದ ದಿನಾಂಕ 5-9-13 ರಿಂದ 7-9-13 ರ ವರೆಗೆ ಏರ್ಪಡಿಸಿರುವ ಕರಾವಳಿ ನಿಯಂತ್ರಣ ವಲಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನ ಸರಾಸರಿ ಆಯಸ್ಸು 50-60 ವರ್ಷ ಆದರೆ ನಾವು ಸಾವಿರಾರು ವರ್ಷಗಳಿಂದ ನಮಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮೂಲಭೂತವಾದ ನೀರು,ಗಾಳಿ ಮುಂತಾದವುಗಳನ್ನು ನೀಡಿರುವ ಪರಿಸರವನ್ನು ಅಭಿವೃದ್ಧಿ ಆಧುನಿಕತೆ ಹೆಸರಲ್ಲಿ ವಿನಾಶ ಮಾಡುತ್ತಿದ್ದೇವೆ.ಆದ್ದರಿಂದ ಪರಿಸರ ಕುರಿತಾದ ನಮ್ಮ ಮನೋಸ್ಥಿತಿ ಬದಲಾಗಬೇಕು. ನಮ್ಮ ಪರಿಸರವನ್ನು ಸಂರಕ್ಷಿಸಲು ಎಲ್ಲರೂ ಸಂಘಟಿತರಾಗಬೇಕು. ಪರಿಸರ ಸಂರಕ್ಷಣೆಗಾಗಿ ಸರ್ಕಾರ ರೂಪಿಸಿರುವ ಕಾನೂನನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕೆಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಮಹಾನಿದರ್ೇಶಕರಾದ ಶ್ರೀ ಕೆ.ಎಚ್.ವಿನಯಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಸಂಸ್ಥೆ ಕನರ್ಾಟಕ ಸಕರ್ಾರದ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದು,ಪರಿಸರ ನಿರ್ವಹಣೆಗೆ ಪರಿಸರ ಸಂಬಂಧಿ ವಿಷಯಗಳ ಕುರಿತು ತರಬೇತಿ ನೀಡುವ ಮೂಲಕ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಪರಿಸರ ಸಂರಕ್ಷಣೆ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ,ಮಳೆ ನೀರು ಕೊಯಿಲು ಹಾಗೂ ಕರಾವಳಿ ನಿಯಂತ್ರಣ ವಲಯ ವಿಷಯಗಳ ಕುರಿತು ಅಧಿಕಾರಿಗಳು,ಸಿಬ್ಬಂದಿ,ವೈದ್ಯಕೀಯ ಕ್ಷೇತ್ರದ ವೈದ್ಯರು,ದಾದಿಯರು,ಶುಶ್ರೂಷಕರು,ಪ್ರಯೋಗಾಲಯ ತಂತ್ರಜ್ಞರು,ಗ್ರಾಮ ಪಂಚಾಯತ್ ಗಳ ಚುನಾಯಿತ ಪ್ರತಿನಿಧಿಗಳು,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುಂತಾದವರಿಗೆ ತರಬೇತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೀಡಲಾಗುತ್ತಿದೆ ಎಂದರು.
ರಾಜ್ಯದ ಕರಾವಳಿ ತೀರ ಪ್ರದೇಶ ಕಲುಷಿತವಾಗದಂತೆ ಮಾಲಿನ್ಯವಾಗದಂತೆ ತಡೆಯುವ ಉದ್ದೇಶದಿಂದ ಕರಾವಳಿ ನಿಯಂತ್ರಣ ವಲಯ ತರಬೇತಿಯನ್ನು ದಕ್ಷಿಣಕನ್ನಡ ಜಿಲ್ಲೆ ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜೈವಿಕ ವೈದ್ಯಕೀಯ ತ್ಯಾಜ್ಯದ ಪ್ರಮಾಣ ಶೇಕಡಾ 15-20 ಆದರೆ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಹೋದಲ್ಲಿ ಸಾಮಾನ್ಯ ತ್ಯಾಜ್ಯದ ಒಟ್ಟಿಗೆ ಸೇರಿ ಇಡೀ ಪರಿಸರವನ್ನು ವಿಷಮಯವಾಗಿಸಲಿದೆ .ಆದ್ದರಿಂದ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆಸಕ್ತಿ ಆವಶ್ಯ ಎಂದು ವಿನಯ ಕುಮಾರ್ ತಿಳಿಸಿದರು.
2013-14 ರಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಎರಡು ಪ್ರಮುಖ ವಿಷಯಗಳನ್ನು ಕೈಗೆತ್ತಿಕೊಂಡಿದೆ.ಘನತ್ಯಾಜ್ಯ ನಿರ್ವಹಣೆ ತರಬೇತಿ ಮತ್ತು ಕಸಾಯಿಖಾನೆಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಕರಾವಳಿ ನಿಯಂತ್ರಣ ವಲಯ ಸೇರಿದೆ. ಸಮಾರಂಭಕ್ಕೆ ತರಬೇತಿ ಮುಖ್ಯಸ್ಥರು ಬಿ.ಬಸವರಾಜು ಸ್ವಾಗತಿಸಿದರು.